ಬಿಎಸ್ ವೈ ಇಳಿಸುವಾಗ ಇದ್ದ ಬಲಶಾಲಿ ದೆಹಲಿ ಹೈಕಮಾಂಡ್, ಇಳಿದ ಮೇಲೆ ಮಂಡಿಯೂರಿ ಶರಣಾಯಿತಲ್ಲ ಏಕೆ..? ರಾಜ್ಯ ಕಾಂಗ್ರೆಸ್ ವ್ಯಂಗ್ಯ. ಬೆಂಗಳೂರು,ಆಗಸ್ಟ್,5,2021(..):ಬಿಎಸ್ ವೈ ಅವರನ್ನು ಇಳಿಸುವಾಗ ಇದ್ದ ಬಲಶಾಲಿ ದೆಹಲಿ ಹೈಕಮಾಂಡ್, ಇಳಿದಮೇಲೆ ಮಂಡಿಯೂರಿ ಶರಣಾಯಿತಲ್ಲ ಏಕೆ..? ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ. ಈ ಕುರಿತು ಟ್ವಿಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಬಿಎಸ್ ವೈ ಅವರು ತಮ್ಮ ಕಣ್ಣೀರಿಗೆ ತಕ್ಕ ಪ್ರತಿಕಾರ ತೀರಿಸಿಕೊಳ್ಳುತ್ತಿದ್ದಾರೆ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ತಮ್ಮ ವಿರುದ್ಧದ ಬಂಡಾಯಗಾರರನ್ನ ಸಂಪುಟದಿಂದ ದೂರವಿಡುವ ಮೂಲಕ ಮೀರ್ ಸಾಧಿಕ್ ನಳೀನ್ ಕುಮಾರ್ ಕಟೀಲ್ ತಂಡಕ್ಕೆ ಮರ್ಮಾಘಾತ ನೀಡಿದ್ದಾರೆ. ಕಟೀಲ್ ಕಾಮಿಡಿ ಮಾಡಲು ಮಾತ್ರ. ಸಿಎಂ ಆಯ್ಕೆಯಿಂದ ಸಚಿವರ ಆಯ್ಕೆವರೆಗೂ BSYಅವರೇ ಹೈಕಮಾಂಡ್ ಆಗಿದ್ದಾರೆ ಎಂದು ನಳೀನ್ ಕುಮಾರ್ ಕಟೀಲ್ ಗೆ ಕುಟುಕಿದೆ. ಬಿಜೆಪಿಯಲ್ಲಿ ದಲಿತ, ಹಿಂದುಳಿದವರಿಗೆ ಕೊನೆ ಸಾಲಿನ ಕುರ್ಚಿ ಮಾತ್ರ. ಹಾಗೆಯೇ ದವಳಗಿರಿ ಸರ್ಕಾರದ ಸಂಪುಟದಲ್ಲಿ ದಲಿತರನ್ನ ಕಡೆಗಣಿಸಿ ಬಿಜೆಪಿ ತನ್ನ ದಲಿತ ವಿರೋಧಿ ನೀತಿಯನ್ನ ಮತ್ತೊಮ್ಮೆ ನಿರೂಪಿಸಿದೆ. ದಲಿತರನ್ನು ಸಿಎಂ ಮಾಡುವುದಿರಲಿ ಕೊನೆ ಪಕ್ಷ ಸಂಪುಟದಲ್ಲಿಯೂ ಪ್ರಾತಿನಿಧ್ಯ ನೀಡದ ಬಿಜೆಪಿ ಇತರ ಪಕ್ಷಗಳಿಗೆ ಆರೋಪಿಸುವುದು ಹಾಸ್ಯಾಸ್ಪದ. ಬಿಜೆಪಿಯಲ್ಲಿ ದಲಿತ, ಹಿಂದುಳಿದವರಿಗೆ ಕೊನೆ ಸಾಲಿನ ಕುರ್ಚಿ ಮಾತ್ರ ಎಂದು ಟೀಕಿಸಿದೆ. ಮೊದಲೆಲ್ಲ ಕಾಂಗ್ರೆಸ್‌ ಗೆ ‘ಹೈಕಮಾಂಡ್ ಸಂಸ್ಕೃತಿ’ ಎಂದು ಹೇಳುತ್ತಿದ್ದ ಬಿಜೆಪಿ ಈಗ ತಮ್ಮದೇ ‘ಬಲಿಷ್ಠ ಹೈಕಮಾಂಡ್’ ಎಂದು ಬಿಂಬಿಸಿಕೊಳ್ಳುತ್ತಾ ತಮ್ಮ ಡಬಲ್ ಸ್ಟ್ಯಾಂಡರ್ಡ್ ನೀತಿ ನಿರೂಪಿಸಿತ್ತು! ಬಿಎಸ್ ವೈ ಅವರನ್ನು ಇಳಿಸುವಾಗ ಇದ್ದ ಬಲಶಾಲಿ ದೆಹಲಿ ಹೈಕಮಾಂಡ್, ಇಳಿದಮೇಲೆ ಮಂಡಿಯೂರಿ ಶರಣಾಯಿತಲ್ಲ ಏಕೆ..? ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. …. , : . , 5, 2021 (..): ‘ , “ .. , .?” , , . , , . , .: / / / .. / : - - , - - - -