ಐಸಿಸಿ ಟಿ 20 ವಿಶ್ವಕಪ್: ಭಾರತ-ಪಾಕಿಸ್ತಾನ ಪಂದ್ಯದ ದಿನಾಂಕ ನಿಗದಿ ಬೆಂಗಳೂರು, ಆಗಸ್ಟ್ 05, 2021 (..):ಐಸಿಸಿ ಟಿ 20 ವಿಶ್ವಕಪ್ ಪಂದ್ಯಾವಳಿಯ ಅಧಿಕೃತ ವೇಳಾಪಟ್ಟಿಯನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಅಕ್ಟೋಬರ್ 24 ರಂದು ನಡೆಯಲಿದೆ. ಅಕ್ಟೋಬರ್ 24, ಭಾನುವಾರ ನಡೆಯಲಿದೆ ಎನ್ನಲಾಗಿದೆ, ಅಕ್ಟೋಬರ್ 17 ರಿಂದ ಆರಂಭವಾಗುವ ಮೊದಲ ವಾರದ ಅರ್ಹತಾ ಸುತ್ತಿನ ಪಂದ್ಯಗಳು ಮಸ್ಕತ್, ಒಮಾನ್‌ನಲ್ಲಿ ನಡೆಯಲಿವೆ’ ಎಂದು ಐಸಿಸಿ ಮಂಡಳಿ ಮೂಲಗಳು ತಿಳಿಸಿದೆ. ಅಂದಹಾಗೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಾರ, ಮಾರ್ಚ್ 20, 2021 ರ ವೇಳೆಗೆ ತಂಡದ ಶ್ರೇಯಾಂಕಗಳ ಆಧಾರದ ಮೇಲೆ ಸೂಪರ್ 12 ರ ಗುಂಪುಗಳನ್ನು ಆಯ್ಕೆ ಮಾಡಲಾಗಿದೆ.