ಡಾಲಿ ಧನಂಜಯ್ ಈಗ ಪ್ರೊಡ್ಯೂಸರ್ ! ಬೆಂಗಳೂರು, ಆಗಸ್ಟ್ 05, 2021 (..):ನಟ ಡಾಲಿ ಧನಂಜಯ್‌ ಈಗ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದಾರೆ. ಹೌದು. ಧನಂಜಯ್‌ ಹೆಡ್-ಬುಷ್ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿ ಹೊರಹೊಮ್ಮಿದ್ದಾರೆ. ಅಂದಹಾಗೆ ಅಗ್ರಿ ಶೀಧರ್ ಕಥೆ-ಚಿತ್ರಕಥೆ ಇರುವ ಹೆಡ್-ಬುಷ್ ಚಿತ್ರ ಮೊದಲ ಲಾಕ್ಡೌನ್ ಗಿಂತಲೂ ಮೊದಲೇ ಘೋಷಣೆಯಾಗಿತ್ತು. ಬೆಂಗಳೂರಿನ ಮಾಜಿ ಡಾನ್.ಎಂ.ಪಿ.ಜಯರಾಜ್ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರವೊಂದಲ್ಲಿ ಧನಂಜಯ್ ಅವರು ಇದೇ ಮೊದಲ ಬಾರಿಗೆ ಬಂಡವಾಳ ಹೂಡುತ್ತಿದ್ದಾರೆ. ಆದರೆ, ಪೂರ್ಣ ಪ್ರಮಾಣದ ಬದಲಿಗೆ ಪಾಲುದಾರರಾಗಿ ಎಂಬ ಸುದ್ದಿ ಹೊರಬಿದ್ದಿದೆ.