ಶಾಸಕರಿಗೆ ಕರೆ ಮಾಡುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ: ನೂತನ ಸಚಿವರ ಸಂಭಾವ್ಯ ಪಟ್ಟಿ ಹೀಗಿದೆ ನೋಡಿ… ಬೆಂಗಳೂರು,ಆಗಸ್ಟ್,4,2021(..):ರಾಜ್ಯ ಸಚಿವ ಸಂಪುಟ ರಚನೆ ಇಂದು ಆಗಲಿದ್ದು ನೂತನ ಸಚಿವರಾಗುವವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಕರೆ ಮಾಡಿ ಪ್ರಮಾಣ ವಚನ ಸ್ವೀಕರಿಸಲು ಆಗಮಿಸುವಂತೆ ಸೂಚನೆ ನೀಡುತ್ತಿದ್ದಾರೆ ಎನ್ನಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸೇರುವ ನೂತನ ಸಚಿವರ ಸಂಭಾವ್ಯ ಪಟ್ಟಿ ಹೀಗಿದೆ ನೋಡಿ. ಗೋವಿಂದ ಕಾರಜೋಳ ಎಸ್ ಟಿ ಸೋಮಶೇಖರ್ ಭೈರತಿ ಬಸವರಾಜ್ ಪೂರ್ಣಿಮಾ ಶ್ರೀನಿವಾಸ್ ಡಾ.ಸಿಎನ್.ಅಶ್ವತ್ಥನಾರಾಯಣ ಅರಗ ಜ್ಞಾನೇಂದ್ರ ಬಿ.ಶ್ರೀರಾಮುಲು ಉಮೇಶ್ ಕತ್ತಿ ಡಾ.ಕೆ.ಸುಧಾಕರ್ ಎಸ್.ಅಂಗಾರ ಅರವಿಂದ ಲಿಂಬಾವಳಿ ಆನಂದ್ ಸಿಂಗ್ ವಿ.ಸೋಮಣ್ಣ ಮುನಿರತ್ನ ಕೆ.ಎಸ್.ಈಶ್ವರಪ್ಪ ಬಿ.ಸಿ.ಪಾಟೀಲ್ ಕೆ.ಗೋಪಾಲಯ್ಯ ನಾರಾಯಣ ಗೌಡ ಹಾಲಪ್ಪ ಆಚಾರ್ ಜೆಸಿ ಮಾಧುಸ್ವಾಮಿ ವಿ.ಸುನೀಲ್ ಕುಮಾರ್ ಶಿವರಾಂ ಹೆಬ್ಬಾರ್ ಮುರುಗೇಶ್ ನಿರಾಣಿ ಶಶಿಕಲಾ ಜೊಲ್ಲೆ ಸಿ.ಸಿ ಪಾಟೀಲ್ ಕೋಟಾ ಶ್ರೀನಿವಾಸ ಪೂಜಾರಿ ಬಿ.ಸಿ ನಾಗೇಶ್. ಶಂಕರ ಪಾಟೀಲ್ ಮುನೇನಕೊಪ್ಪ. ನೂತನ ಸಚಿವರ ಪಟ್ಟಿಯಲ್ಲಿ ಅರವಿಂದ್ ಬೆಲ್ಲದ್ ಹಾಗೂ ಸಿಪಿ ಯೋಗೇಶ್ವರ್ ಅವರ ಹೆಸರನ್ನು ಕೈಬಿಡಲಾಗಿದೆ ಎನ್ನಲಾಗಿದೆ. ಅದೇ ರೀತಿ ವಲಸಿಗರಾದ ಶ್ರೀಮಂತ್ ಪಾಟೀಲ್ ಮತ್ತು ಆರ್.ಶಂಕರ್ ಗೂ ಸಚಿವ ಈ ಬಾರಿ ಕೋಕ್ ನೀಡಲಾಗಿದೆ ಎನ್ನಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಸೇರಲಿರುವಂತ ನೂತನ ಸಚಿವರು ಇಂದು ಮಧ್ಯಾಹ್ನ 2.15ಕ್ಕೆ ರಾಜ ಭವನದ ಗಾಜಿನ ಮನೆಯಲ್ಲಿ ನಡೆಯಲಿರುವಂತ ಸರಳ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. : - - -