ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಸೈಕಲ್ ರ್ಯಾಲಿ. ನವದೆಹಲಿ,ಆಗಸ್ಟ್,3,2021(..):ದೇಶದಲ್ಲಿ ಪೆಟ್ರೋಲ್ ಡೀಸೆಲ್ ಏರಿಕೆ ಖಂಡಿಸಿ 14 ವಿಪಕ್ಷಗಳ ಸದಸ್ಯರು ಸೈಕಲ್ ರ್ಯಾಲಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ 14 ವಿಪಕ್ಷಗಳ ಸದಸ್ಯರು ಸೈಕಲ್ ರ್ಯಾಲಿ ಹಮ್ಮಿಕೊಂಡಿದ್ದು ಇನ್ಸ್ ಟಿಟ್ಯೂಷನ್ ಕ್ಲಬ್ ನಿಂದ ಸಂಸತ್ ವರೆಗೆ ಈ ಸೈಕಲ್ ರ್ಯಾಲಿ ನಡೆಯುತ್ತಿದೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಮಾಡಬೇಕು ಎಂದು ಕೇಂದ್ರದ ವಿರುದ್ಧ ವಿಪಕ್ಷಗಳ ಸದಸ್ಯರು ಕಿಡಿಕಾರಿದ್ದಾರೆ. : - – - - - –-