‘ಇ-ರೂಪಿ’ ಡಿಜಿಟಲ್ ಪಾವತಿ ವ್ಯವಸ್ಥೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ. ನವದೆಹಲಿ,ಆಗಸ್ಟ್,2,2021(..):ದೇಶದಲ್ಲಿ ಡಿಜಿಟಲ್ ಪಾವತಿಗೆ ಉತ್ತೇಜನ ನೀಡುವ ಸಲುವಾಗಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫೆರೆನ್ಸ್‌ ಮೂಲಕ ʼಇ-ರೂಪಿ ಡಿಜಿಟಲ್ ಪಾವತಿ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ. ಈ ಇ-ರುಪಿ, ಸರ್ಕಾರಿ ಯೋಜನೆಗಳ ಲಾಭಗಳನ್ನು ಫಲಾನುಭವಿಗೆ ತಲುಪಿಸುವಲ್ಲಿ ಸರ್ಕಾರ ಹಾಗೂ ಫಲಾನುಭವಿ ನಡುವೆ ಪ್ರಸ್ತುತ ಇರುವ ಸೋರಿಕೆ ಹಾಗೂ ದುರುಪಯೋಗವನ್ನು ತಡೆಗಟ್ಟುವಂತಹ ಒಂದು ಉಪಯುಕ್ತ ಉಪಕ್ರಮವಾಗಿದೆ. ಈ ಆಯಪ್ ಅನ್ನು ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದೊಂದಿಗೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ () ರಚಿಸಿದೆ. -, - ಯುಪಿಐ ಪ್ಲಾಟ್ ಫಾರ್ಮ್ ನಲ್ಲಿ ಕಾರ್ಯನಿರ್ವಹಿಸುತ್ತವೆ. ಬಳಕೆದಾರರಿಗೆ ಭೌತಿಕ ಸಂವಹನದ ಅಗತ್ಯವಿಲ್ಲದೆ ನಿರ್ದಿಷ್ಟ ಸೇವೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಇದರರ್ಥ ಗ್ರಾಹಕರು ಮತ್ತು ಸೇವಾ ಪೂರೈಕೆದಾರರು ಇಬ್ಬರೂ ಯಾವುದೇ ಭೌತಿಕ ಇಂಟರ್ಫೇಸ್ ಇಲ್ಲದೆ ವೋಚರ್ ಗಳೊಂದಿಗೆ ವ್ಯವಹರಿಸಬಹುದು ಎನ್ನಲಾಗಿದೆ. : - - –- -