ಲಾಕ್ ಡೌನ್ ನಂತರ ಮೈಸೂರು ಮೃಗಾಲಯಕ್ಕೆ ಪ್ರವಾಸಿಗರ ಲಗ್ಗೆ: ಆರ್ಥಿಕತೆಯಲ್ಲಿ ಚೇತರಿಕೆ. ಮೈಸೂರು,ಆಗಸ್ಟ್,2,2021(..):ಲಾಕ್ ಡೌನ್ ನಂತರ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಪ್ರವಾಸಿಗರು ಲಗ್ಗೆ ಇಡುತ್ತಿದ್ದು ಪ್ರವಾಸಿಗರ ದಂಡು ಹರಿದು ಬರುತ್ತಿರುವ ಹಿನ್ನೆಲೆ ಮೃಗಾಲಯದ ಆರ್ಥಿಕತೆ ಚೇತರಿಕೆ ಕಾಣಿತ್ತಿದೆ ಎನ್ನಲಾಗಿದೆ. ನಿನ್ನೆ(ಭಾನುವಾರ) ಒಂದೇ ದಿನ ಮೈಸೂರಿ‌ನ ಮೃಗಾಲಯಕ್ಕೆ 6 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದು, ಹೆಚ್ಚಾಗಿ ಪ್ರವಾಸಿಗರ ಆಗಮನದಿಂದ ಮೃಗಾಲಯದ ಸಿಬ್ಬಂದಿ ಫುಲ್ ಖುಷ್ ಆಗಿದ್ದಾರೆ. ಸಾಮಾನ್ಯ ದಿನಗಳಂತೆಯೇ ಪ್ರಾಣಿ ಪ್ರೀಯರು ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದು ಇದರಿಂದಾಗಿ ಮೃಗಾಲಯದ ಆರ್ಥಿಕತೆ ವೃದ್ದಿಸಿದೆ ಎಂದು ಕರ್ನಾಟಕ ರಾಜ್ಯ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹಾದೇವ ಸ್ವಾಮಿ ತಿಳಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿರುವ ಅವರು, ಸರ್ಕಾರದಿಂದ ಈಗಾಗಲೇ ನಾವು ಕೇಳಿದಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. ಇನ್ನೂ 23 ಕೋಟಿ ಅನುದಾನಕ್ಕೆ ಸಿಎಂ ಬಸವರಾಜು ಬೊಮ್ಮಾಯಿ ಅವರನ್ನ ಕೇಳಿದ್ದಿವಿ. ಬಿಎಸ್ ಯಡಿಯೂರಪ್ಪ ಅವಧಿಯಲ್ಲಿ 8 ಕೋಟಿ ಹಣ ಬಿಡುಗಡೆ ಮಾಡಲಾಗಿತ್ತು. ಇನ್ನೂ ಉಳಿದ ಹಣವನ್ನ ಸಚಿವ ಸಂಪುಟ ರಚನೆಯ ಬಳಿಕ ಅವರ ಮುಂದೆ ಈ ಬಗ್ಗೆ ಪ್ರಸ್ತಾಪ ಮಾಡಿ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಸದ್ಯದ ಮಟ್ಟಿಗೆ ಮೃಗಾಲಯದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ. ಇನ್ನೂ ಎರಡು ಮೂರು ದಿನಗಳಲ್ಲಿ ಸಿಂಗಾಪುರ್ ನಿಂದ ವಾರೋಂಗೋಟ ಮತ್ತು ಗೊರಿಲ್ಲಗಳು ಬರಲಿವೆ ಎಂದು ಎಲ್.ಆರ್. ಮಹಾದೇವ ಸ್ವಾಮಿ ತಿಳಿಸಿದರು. … : , 2, 2021 (..): , . . 6,000 . , .. . . “ . 23 . .. . 8 . , . . 2-3 ,” .: / / / / : --- - – -