ಮೇಕೆದಾಟು ಯೋಜನೆ ವಿರೋಧಿಸಿ ಅಣ್ಣಾಮಲೈ ಉಪವಾಸ: ಸಂಸದ ಪ್ರತಾಪ್ ಸಿಂಹ ಹೇಳಿದ್ದೇನು? ಮೈಸೂರು, ಆಗಸ್ಟ್ 1, 2021 (..):ಮೇಕೆದಾಟು ಯೋಜನೆ‌ ವಿರೋಧಿಸಿ ಅಣ್ಣಾಮಲೈ ಉಪವಾಸ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಸಂಸದ ಪ್ರತಾಪ್‌ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಅಣ್ಣಾಮಲೈ ಅಲ್ಲಿನ ರಾಜಕೀಯಕ್ಕಾಗಿ ಅವರು ಉಪವಾಸ ಮಾಡ್ತಿದ್ದಾರೆ. ಅದರ ಬಗ್ಗೆ ನಮ್ಮಲ್ಲಿ ಹೆಚ್ಚು ಚರ್ಚೆ ಬೇಡ ಎಂದಿದ್ದಾರೆ. ನಮ್ಮ ರಾಜಕಾರಣಿಗಳು ಹೇಳಿಕೆ ಕೊಡುವುದನ್ನ ಬಿಟ್ಟು ಡಿಪಿಆರ್ ರೆಡಿ ಮಾಡಲು ಒತ್ತು ನೀಡಬೇಕು ಎಂದು ರಾಜ್ಯ ರಾಜಕಾರಣಿಗಳಿಗೆ ಪ್ರತಾಪ್‌ಸಿಂಹ ಸಲಹೆ ನೀಡಿದ್ದಾರೆ. ಲಸಿಕಾ ಅಭಿಯಾನ: ಸರ್ಕಾರಿ ನೌಕರರ ಸಂಘದ ಕುಟುಂಬಕ್ಕೆ ಕೋವಿಡ್ ಲಸಿಕೆ ವಿತರಣೆಗೆ ಪ್ರತಾಪ್ ಸಿಂಹ ಚಾಲನೆ ನೀಡಿದ್ದಾರೆ. ನಗರದ ಧನ್ವಂತರಿ ರಸ್ತೆಯಲ್ಲಿರುವ ಕಚೇರಿಯಲ್ಲಿ ಲಸಿಕಾ ಅಭಿಯಾನಕ್ಕೆ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು. ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಕುಟುಂಬದ ಸದಸ್ಯರಿಗೆ ಲಸಿಕೆ ನೀಡಲಾಗುತ್ತಿದೆ.