ಬ್ಲಾಕ್ ಮೇಲ್ ಮೂಲಕ ಬೊಮ್ಮಾಯಿ ಅವರನ್ನ ಸಿಎಂ ಮಾಡಿ ನನಗೆ ಅವಕಾಶ ತಪ್ಪಿಸಿದ್ಧೆ ಬಿಎಸ್ ವೈ- ಬಸನಗೌಡ ಪಾಟೀಲ್ ಯತ್ನಾಳ್ ಹೊಸಬಾಂಬ್. ವಿಜಯಪುರ,ಜುಲೈ,30,2021(..):ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದು ಸಿಎಂ ಬದಲಾವಣೆ ಮಾಡಿದ ನಂತರವೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ಮುಂದುವರೆಸಿದ್ದಾರೆ. ಇದೀಗ ಬಿಎಸ್ ಯಡಿಯೂರಪ್ಪ ವಿರುದ್ಧ ಹೊಸ ಬಾಂಬ್ ಸಿಡಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನು ಮುಖ್ಯಮಂತ್ರಿಯಾಗುವ ಅವಕಾಶವನ್ನು ತಪ್ಪಿಸಿದ್ದೇ ಬಿ ಎಸ್ ವೈ. ಯತ್ನಾಳ್ ಅವರನ್ನು ಸಿಎಂ ಮಾಡಿದರೆ 3 ತಿಂಗಳಲ್ಲಿ ಸರ್ಕಾರವನ್ನೇ ಬೀಳಿಸುತ್ತೇನೆ ಎಂದು ಕೇಂದ್ರ ನಾಯಕರನ್ನು ಬೆದರಿಸಿ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನನಗೆ ಮುಖ್ಯಮಂತ್ರಿ ಆಗೋ ಅವಕಾಶವಿತ್ತು, ಯಡಿಯೂರಪ್ಪ ನನಗೆ ಅವಕಾಶ ತಪ್ಪಿಸಿದರು. ಯತ್ನಾಳ್ ಅವರನ್ನ ಸಿಎಂ ಮಾಡಿದರೆ ಮೂರು ತಿಂಗಳಲ್ಲಿ ಸರ್ಕಾರ‌ ಕೆಡವುತ್ತೇನೆಂದು ಕೇಂದ್ರದ ನಾಯಕರ ಮುಂದೆ ಯಡಿಯೂರಪ್ಪ ಬೆದರಿಕೆ ಹಾಕಿದ್ದರು ಆದರೆ ಈಗ ನಾನು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲ್ಲ. ಈ ಹಿಂದೆ ನಾನೇನೂ ದೆಹಲಿ‌ಯಲ್ಲಿ ಲಾಬಿ ಮಾಡಿ ಕೇಂದ್ರದಲ್ಲಿ ಸಚಿವ ಆಗಿರಲಿಲ್ಲ. ಮೋದಿ ಪ್ರಾಮಾಣಿಕರು, ದೇಶಕ್ಕಾಗಿ ಪರಿವರ್ತನೆ ಯಜ್ಞ ಮಾಡುತ್ತಿದ್ದಾರೆ. ದೆಹಲಿ ಲಾಬಿ ಮಾಡಿ ಮಂತ್ರಿಯಾಗೋವಷ್ಟು‌ ಕೆಳಮಟ್ಟದ ರಾಜಕಾರಣಿಯಲ್ಲಾ ನಾನು. ಯಡಿಯೂರಪ್ಪ ಒಬ್ಬರೇ ಬೊಮ್ಮಾಯಿ ಅವರನ್ನ ಸಿಎಂ ಮಾಡಿಲ್ಲ. ಯತ್ನಾಳ್ ಅವರನ್ನ ಸಿಎಂ ಮಾಡಿದರೆ ಮೂರು ತಿಂಗಳಲ್ಲಿ ಸರ್ಕಾರ‌ ಕೆಡವುತ್ತೇನೆಂದು ಕೇಂದ್ರದ ನಾಯಕರ ಮುಂದೆ ಯಡಿಯೂರಪ್ಪ ಬೆದರಿಕೆ ಹಾಕಿದರು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ 10 ಸಾವಿರ ಕೋಟಿ ಭ್ರಷ್ಟಾಚಾರ ಯತ್ನಾಳ್ ಸಿಎಂ ಆದರೆ ಇವರೆಲ್ಲಾ ಜೈಲಿಗೆ ಹೋಗ್ತಾರೆ ಎಂಬ ಭಯವಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ 10 ಸಾವಿರ ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ. ಯಡಿಯೂರಪ್ಪ ತಾವು ಶಿಕಾರಿಪುರದ ಸಿಎಂ ಎಂಬಂತೆ ವರ್ತಿಸಿದರು. ತಮ್ಮ ಭಾಗಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಕೊಂಡಿದ್ದಾರೆ. ಈಗ ಜಿಲ್ಲೆಗಳ ಪ್ರವಾಸಕ್ಕೆ ಬರುತ್ತೇನೆಂದು ಹೇಳುತ್ತಿದ್ದಾರೆ. ಯಡಿಯೂರಪ್ಪ ವಿಜಯಪುರ ಜಿಲ್ಲೆಗೆ ಬರಲಿ ನಾನೇ ಈ ಕುರಿತು ಪ್ರಶ್ನೆ ಮಾಡುತ್ತೇನೆ. ನನ್ನ ಬಗ್ಗೆ ಯಡಿಯೂರಪ್ಪ ಅವರಿಗೆ ಭಯ ಇದೆ. ಅದಕ್ಕೇ ನನಗೆ ಸಿಎಂ ಸ್ಥಾನ ತಪ್ಪಿಸಿದರು ಎಂದು ಯತ್ನಾಳ್ ಆರೋಪಿಸಿದರು. …. , 30, 2021 (..): .. . , ’ .. ’ . “ . ,” . , “ . .10,000 ! . , . . ,” .: / .. / / :- - - - - .