ಮೈಸೂರಿನಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ನಟ ಶಿವರಾಜ್ ಕುಮಾರ್ ಭೇಟಿ. ಮೈಸೂರು,ಜುಲೈ,30,2021(..):ಮೈಸೂರಿನಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ನಟ ಶಿವರಾಜ್ ಕುಮಾರ್ ಭೇಟಿಯಾಗಿದ್ದಾರೆ. ಇಂದು ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡಿಬೆಟ್ಟಕ್ಕೆ ಪೂಜೆಗೆ ಕೆ.ಎಸ್ ಈಶ್ವರಪ್ಪ ತೆರಳಲು ಬಂದಿದ್ದರು. ಈ ವೇಳೆ ಖಾಸಗಿ ಹೋಟೆಲ್ ನಲ್ಲಿ ಈಶ್ವರಪ್ಪ ಅವರನ್ನ ನಟ ಶಿವಣ್ಣ ಭೇಟಿ ಮಾಡಿದ್ದು, ಪರಸ್ಪರ ಇಬ್ಬರು ಕುಶಲೋಪರಿ ವಿಚಾರಿಸಿದ್ದಾರೆ . ಈ ಸಂದರ್ಭದಲ್ಲಿ ಒಂದೇ ಹೋಟೆಲ್ ನಲ್ಲಿ ನಟ ಶಿವರಾಜ್ ಕುಮಾರ್ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಬ್ರೇಕ್ ಫಾಸ್ಟ್ ಮಾಡಿದರು. ಈ ಹಿಂದೆ ನಟ ಶಿವರಾಜ್ ಕುಮಾರ್ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಲೋಕಸಭಾ ಕ್ಷೇತ್ರದಿಂದ ಪತ್ನಿ ಗೀತಾ ರನ್ನ ಜೆಡಿಎಸ್ ನಿಂದ ಕಣಕ್ಕಿಳಿಸಿದ್ದರು. ನಟ ಶಿವರಾಜ್ ಕುಮಾರ್ ಶಿವಮೊಗ್ಗ ಜಿಲ್ಲೆಯ ಅಳಿಯನೂ ಆಗಿದ್ದಾರೆ. ….. .. , 30, 2021 (..): .. ... ‘ ’. . ’ . -- .: .. / / / / : - – - - – .