ನಿರ್ದೇಶಕ ಯೋಗರಾಜ್ ಭಟ್ಟರ ಹೊಸ ಸಿನಿಮಾ ‘ಪುಂಡಲೀಕ’ ಘೋಷಣೆ ! ಬೆಂಗಳೂರು, ಜುಲೈ 30, 2021 (..):ನಿರ್ದೇಶಕ ಯೋಗರಾಜ್ ಭಟ್ಟರು ಮತ್ತೊಂದು ಹೊಸ ಚಿತ್ರದ ನಿರ್ದೇಶನಕ್ಕೆ ರೆಡಿಯಾಗಿದ್ದಾರೆ. ಶಿವರಾಜ್ ಕುಮಾರ್, ಪ್ರಭುದೇವಾ ನಟಿಸಲಿರುವ ಸಿನಿಮಾ ಒಂದನ್ನು ಯೋಗರಾಜ್ ಭಟ್ ನಿರ್ದೇಶಿಸಲಿದ್ದಾರೆ. ಹೊಸ ಸಿನಿಮಾದಲ್ಲಿ ಅನಂತ್‌ ನಾಗ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಸಿನಿಮಾದಲ್ಲಿ ಹೊಸ ನಾಯಕ ನಟನೊಬ್ಬ ಎಂಟ್ರಿ ಕೊಡಲಿದ್ದಾರೆ. ಚಿತ್ರಕ್ಕೆ ‘ಪುಂಡಲೀಕ’ ಎಂದು ಹೆಸರಿಡಲಾಗಿದೆ. ನಿರ್ಮಾಪಕ ಬಿ.ಸಿ.ಪಾಟೀಲ್ ಅವರೇನಾ ಅಥವಾ ಇನ್ನೊಬ್ಬರಾ ಎಂಬುದನ್ನು ಕಾದು ನೋಡಬೇಕಿದೆ. ಯೋಗರಾಜ್ ಭಟ್ಟರ ಕತೆಯಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಗೋವಿಂದೇಗೌಡ ನಾಯಕರಾಗಿದ್ದಾರೆ. ‘ಗಾಳಿಪಟ 2’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಲ್ಲೂ ಭಟ್ಟರು ತೊಡಗಿಸಿಕೊಂಡಿದ್ದಾರೆ.