ಶಿವಕಾರ್ತಿಕೇಯನ್ ಸಿನಿಮಾಗೆ ರಶ್ಮಿಕಾ ನಾಯಕಿ ಬೆಂಗಳೂರು, ಜುಲೈ 28, 2021 (..):ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾಗೆ ಕಾಲಿವುಡ್​ನಿಂದಲೂ ಮತ್ತೊಂದು ಆಫರ್ ಬಂದಿದೆ. ಬಾಲಿವುಡ್​ನಲ್ಲಿ ಮಿಷನ್​ ಮಜ್ನು ಹಾಗೂ ಗುಡ್​ ಬೈ ಚಿತ್ರಗಳ ಶೂಟಿಂಗ್​ಗಳಲ್ಲಿ ರಶ್ಮಿಕಾ ನಿರತರಾಗಿದ್ದು, ಮತ್ತೊಂದು ಬಿಗ್ ಬಜೆಟ್ ಮೂವಿ ಅವಕಾಶ ಸಿಕ್ಕಿದೆ. ಕಾಲಿವುಡ್​ ನಟ ಶಿವಕಾರ್ತಿಕೇಯನ್​ ಅವರ ಜೊತೆ ನಟಿಸುವ ಅವಕಾಶ ಅರಸಿ ಬಂದಿದೆಯಂತೆ. ಚಿತ್ರವನ್ನು ತೆಲುಗು ಹಾಗೂ ತಮಿಳಿನಲ್ಲಿ ಮಾಡಲು ಚಿತ್ರತಂಡ ನಿರ್ಧರಿಸಿದೆಯಂತೆ. ಜಾತಿ ರತ್ನಾಲು ಸಿನಿಮಾ ನಿರ್ದೇಶಿಸಿರುವ ಅನುದೀಪ್ ಅವರೇ ಈ ಚಿತ್ರಕ್ಕೆ ಆಯಕ್ಷನ್ ಕಟ್​ ಹೇಳಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಈ ಸಿನಿಮಾ ಎರಡು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಕಾರಣಕ್ಕೆ ರಶ್ಮಿಕಾ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿದ್ದಾರೆ ಎನ್ನುವರ ಬಗ್ಗೆ ಚಿತ್ರತಂಡ ಕಡೆಯಿಂದ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.