ಸೆಪ್ಟೆಂಬರ್ 24 ರಂದು ‘ಬಡವ ರಾಸ್ಕಲ್’ ಆಗಿ ತೆರೆ ಮೇಲೆ ಬರಲಿದ್ದಾರೆ ಡಾಲಿ ! ಬೆಂಗಳೂರು, ಜುಲೈ 28, 2021 (..):ಡಾಲಿ ಇದೀಗ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ. ಯೆಸ್. ಇದೀಗ ‘ಬಡವ ರಾಸ್ಕಲ್’ ಆಗಿ ಪ್ರೇಕ್ಷಕರ ಮುಂದೆ ಬರಲು ಧನಂಜಯ್ ಸಜ್ಜಾಗಿದ್ದಾರೆ. ಅಂದಹಾಗೆ ‘ಯುವರತ್ನ’ ಬಳಿಕ ಡಾಲಿಯ ಯಾವುದೇ ಚಿತ್ರದ ಅಪ್ಡೇಟ್​ಗಳು ಹೊರಬಿದ್ದಿರಲಿಲ್ಲ. ಇದೀಗ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಈ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ‘ಬಡವ ರಾಸ್ಕಲ್’ ಅವತಾರದಲ್ಲಿ ಡಾಲಿ ಸೆಪ್ಟೆಂಬರ್ 24 ರಂದು ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಹಾಗೂ ಡಬ್ಬಿಂಗ್ ಕಂಪ್ಲೀಟ್ ಆಗಿದ್ದು, ಒಂದಷ್ಟು ಪ್ರಿ ರಿಲೀಸ್ ಕೆಲಸಗಳನ್ನು ಮಾತ್ರ ಉಳಿಸಿಕೊಂಡಿದೆ. ‘ಬಡವ ರಾಸ್ಕಲ್​’ನಲ್ಲೂ ರಗಡ್ ಕಥಾಹಂದರವಿದೆ ಎನ್ನಲಾಗಿದೆ.