ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಳ್ಳಿ: ಸುಧಾಮೂರ್ತಿ ಮೈಸೂರು, ಜು.27, 2021 : (.. ) ಮಕ್ಕಳು ಪ್ರಶ್ನೆ ಕೇಳುವುದನ್ನು ಯಾರೂ ತಡೆಯಬಾರದು. ಪ್ರಶ್ನೆ ಕೇಳದ ಮಗುವಿನಲ್ಲಿ ಕುತೂಹಲವೇ ಬೆಳೆಯುವುದಿಲ್ಲ ಎಂದು ಇನ್ಫೋಸಿಸ್‌ನ ಸುಧಾಮೂರ್ತಿ ಅಭಿಪ್ರಾಯ ಪಟ್ಟರು. ಮೈಸೂರು ವಿವಿಯ ಕ್ರಾಫರ್ಡ್ ಹಾಲ್‌ನಲ್ಲಿ ನಡೆದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ವರ್ಚುವಲ್ ಲೈವ್ ಮೂಲಕ ಸುಧಾಮೂರ್ತಿ ಮಾತನಾಡಿದರು, ಮಕ್ಕಳಿಗೆ ಕೇವಲ ಅಂಕ ಗಳಿಸುವುದನ್ನು ಶಿಕ್ಷಕರು ಹೇಳಿಕೊಡಬಾರದು. ಬದಲಿಗೆ ಸೋಲನ್ನು ಹೇಗೆ ಎದುರಿಸಬೇಕು? ಆತ್ಮವಿಶ್ವಾಸದಿಂದ ಬದುಕನ್ನು ಸಾಗಿಸುವುದು ಹೇಗೆ ಎಂಬುದರ ಬಗ್ಗೆ ತಿಳಿವಳಿಕೆ ನೀಡಬೇಕು ಎಂದು ಸಲಹೆ ನೀಡಿದರು. ನಡೆಯಬೇಕಾದರೆ ಎಡವಿ ಬೀಳುವುದು ಸಾಮಾನ್ಯ. ಕಷ್ಟಗಳು ಇರದ ಜೀವನ ಇದೆಯಾ? ನಮ್ಮ ಮೈನಸ್ ಪಾಯಿಂಟ್ ನಮಗೆ ಗೊತ್ತಿದ್ದರೆ, ಅದನ್ನು ಬಹುಬೇಗ ತಿದ್ದುಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬಹುದು. ಪಾಠದಷ್ಟೇ ಆಟದಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಮಕ್ಕಳಿಗೆ ಹೊಸ ಹೊಸ ಕೌಶಲ್ಯಗಳನ್ನು ಹೇಳಿಕೊಡಬೇಕು. ಹಣಕಾಸು ನಿರ್ವಹಣೆ ಬಗ್ಗೆ ಹೇಳಿಕೊಡಬೇಕು. ಸಾಮಾನ್ಯ ಜ್ಞಾನ ತುಂಬಾ ಮುಖ್ಯ. ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು. ಎಲ್ಲಾ ಕಾಲಕ್ಕೂ ಜೀವನ ಪ್ರೀತಿಯನ್ನು ಕಳೆದುಕೊಳ್ಳಬಾರದು ಎಂದರು.ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಸ್.ಅಯ್ಯಪ್ಪನ್, ಮೈವಿವಿ ಕುಲಪತಿ ಪ್ರೊ .ಜಿ.ಹೇಮಂತ್ ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ ಹಾಜರಿದ್ದರು. … : , 27, 2021 (..): “ . , ,” . . , . “ . , ,” .“ . . . , ,” .. . , , , , . . , -, , . . .: / / / / / : --------