ಕೋವಿಡ್ ನಿಂದ ಮೃತಪಟ್ಟ ಮೈಸೂರು ಮಹಾನಗರ ಪಾಲಿಕೆಯ ನೌಕರರ ಕುಟುಂಬಕ್ಕೆ ಪರಿಹಾರ ವಿತರಣೆ. ಮೈಸೂರು,ಜುಲೈ,27,2021(..):ಕಳೆದ ಜೂನ್ ನಲ್ಲಿ ಕೋವಿಡ್ ನಿಂದ ಮೃತಪಟ್ಟ ಮೈಸೂರು ಮಹಾನಗರ ಪಾಲಿಕೆಯ ಇಬ್ಬರು ನೌಕರರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ವಿತರಣೆ ಮಾಡಲಾಯಿತು. ವಾಣಿ ವಿಲಾಸ ನೀರು ಸರಬರಾಜು ಮಂಡಳಿಯ ಸಭಾಂಗಣದಲ್ಲಿ ಮೈಸೂರು ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಭಾರ ಮೇಯರ್ ಅನ್ವರ್ ಬೇಗ್ ಅವರು ಮೃತರ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ ಮಾಡಿದರು. ವಾಣಿ ವಿಲಾಸ ನೀರು ಸರಬರಾಜಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಾಲ್ ಮ್ಯಾನ್ ಗಳಾದ ಬಿ.ಡಿ. ಮಂಜುನಾಥ್ (54), ಅಲ್ತಾಫ್ (34) ಕೊವಿಡ್ ಸೋಂಕಿನಿಂದ ಮೃತಪಟ್ಟಿದ್ದರು. ಇದೀಗ ಇವರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರದ ಚೆಕ್ ವಿತರಣೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಕೊರೋನಾದಿಂದಾಗಿ 7 ಮಂದಿ ಪಾಲಿಕೆ ನೌಕರರು ಮೃತ ಪಟ್ಟಿದ್ದಾರೆ. ಎಲ್ಲರಿಗೂ ಪಾಲಿಕೆ ವ್ಯಾಪ್ತಿಯಲ್ಲಿ ತಲಾ 5 ಲಕ್ಷ ರೂ. ಪರಿಹಾರ ಮೊತ್ತವನ್ನ ನೀಡಿದ್ದೇವೆ. ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದ ವತಿಯಿಂದಲೇ ಸುಮಾರು 30 ಲಕ್ಷ ಪರಿಹಾರ ಹಣ ಬರುತ್ತೆ. ಆದ್ರೇ ನಮ್ಮ ಪಾಲಿಕೆ ವ್ಯಾಪ್ತಿಯ ನೌಕರರನ್ನು ಸಹ ಆ ವ್ಯಾಪ್ತಿಗೆ ಸೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಇನ್ನೂ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂದರು. ಕೊರೊನಾ 3ನೇ ಅಲೆ ಎದುರಿಸಲು ಪಾಲಿಕೆ ಸಿದ್ದವಾಗಿದೆ. 2ನೇ ಅಲೆಯ ಸಂದರ್ಭದಲ್ಲಿ ಮಾಡಿಕೊಂಡಿದ್ದ ವ್ಯವಸ್ಥೆಗಳನ್ನು ಮುಂದುವರೆಸಿದ್ದೇವೆ. ಎಲ್ಲಾ ಕೋವಿಡ್ ಸೆಂಟರ್, ಟೆಸ್ಟಿಂಗ್ ಸೆಂಟರ್ ಗಳು ಈಗಲೂ ಕಾರ್ಯ ನಿರ್ವಹಿಸುತ್ತಿವೆ. ಮೈಸೂರಿನಲ್ಲಿ ಪ್ರತಿನಿತ್ಯ 4 ಸಾವಿರಕ್ಕೂ ಹೆಚ್ಚು ಕೋವಿಡ್ ಟೆಸ್ಟಿಂಗ್ ನಡೆಯುತ್ತಿದೆ. ಜಿಲ್ಲಾಡಳಿತ ಕೂಡಾ ಸಮರ್ಪಕವಾಗಿ ವ್ಯಾಕ್ಸಿನ್ ನೀಡುತ್ತಿದೆ ಎಂದು ಲಕ್ಷ್ಮೀ ಕಾಂತರೆಡ್ಡಿ ಮಾಹಿತಿ ನೀಡಿದರು. ….. , 27, 2021 (..): . 5 -19 2020.’ (-) , ... (54) (34) -19 . . 5 . 3rd 2nd . “ , . ’ . ,” .: / / / -19 / / : –- - –-- –