ಬಿ.ಎಸ್.ವೈ ಕಣ್ಣೀರು ಹಾಕಿದ್ದನ್ನ ನೋಡಿ‌ ಮನನೊಂದಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣು. ಚಾಮರಾಜನಗರ, ಜುಲೈ,27,2021(..):ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡುವ ವೇಳೆ ಬಿ.ಎಸ್ ಯಡಿಯೂರಪ್ಪ ಕಣ್ಣೀರು ಹಾಕಿದ್ದನ್ನ ನೋಡಿ‌ ಮನನೊಂದಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ ಎನ್ನಲಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಈ ಘಟನೆ ನಡೆದಿದೆ. ಬಿ.ಎಸ್.ಯುಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ವೇಳೆ ಕಣ್ಣೀರು ಹಾಕಿದ್ದನ್ನು ನೋಡಿ ಅಭಿಮಾನಿ‌ ರವಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬಿಎಸ್ ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಣೆಯ ವಿಡಿಯೋವನ್ನು ಪದೇ ಪದೇ ನೋಡಿ, ಬಿ.ಎಸ್.ವೈ ಕಣ್ಣೀರು ಸುರಿಸಿದ್ದು ಬೇಸರ ತಂದಿದೆ ಎಂದು ಗ್ರಾಮದ‌ ಗುರುಸ್ವಾಮಿ ಅವರ ಬಳಿ ರವಿ ಹೇಳಿಕೊಂಡಿದ್ದ. ರಾತ್ರಿವರೆಗೂ ಇದೇ ಬೇಸರದಲ್ಲಿದ್ದ ರವಿ ಬೆಳಗ್ಗೆ ಅವನ ಕ್ಯಾಂಟೀನ್ ಬಳಿಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಬಿ.ಎಸ್.ಯುಡಿಯೂರಪ್ಪ ಮೇಲೆ‌ ರವಿ ಇಟ್ಟಿದ್ದ ಅಭಿಮಾನ‌ ಕಂಡು ಊರಿನ‌ ಜನ ಅವನನ್ನು ರಾಜಾಹುಲಿ ಎಂದೇ ಕರೆಯುತ್ತಿದ್ದರು. ಸಚಿವ ಮಹದೇವಪ್ರಸಾದ್ ನಿಧನರಾದ ಹಿನ್ನೆಲೆ‌, 2017ರಲ್ಲಿ ನಡೆದ ಉಪಚುನಾವಣೆಗೆ ಹಾಲಿ ಶಾಸಕ ನಿರಂಜನ್ ಕುಮಾರ್ ಪರ ಬಿ.ಎಸ್.ಯಡಿಯೂರಪ್ಪ ಪ್ರಚಾರ ಮಾಡಲು ಗುಂಡ್ಲುಪೇಟೆಗೆ ಆಗಮಿಸಿದ್ದರು.‌ ಈ ವೇಳೆ ಅವರ ಜತೆಗೆ ರವಿ ಊರುಕೇರಿಗಳನ್ನು ಸುತ್ತಿದ್ದನು. ರವಿ ಮಾತು ಮಾತಿಗೂ ಯಡಿಯೂರಪ್ಪ ಜಪ‌ಮಾಡುತ್ತಿದ್ದು ಈ ಮಧ್ಯೆ ಬಿಎಸ್ ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ‌ನೀಡಿದಾಗ ಹಾಕಿದ ಕಣ್ಣೀರು ಕಂಡು ಮನನೊಂದು‌ ಆತ್ಮಹತ್ಯೆ ‌ಮಾಡಿಕೊಂಡಿದ್ದಾನೆ ಎನ್ನಲಾಗಿದೆ. : - -- –-