ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ. ಬೆಂಗಳೂರು,ಜುಲೈ,26,2021(..):ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾಗಿ ಕೆ. ಸದಾಶಿವ ಶೆಣೈ ಅವರನ್ನ ನೇಮಕ ಮಾಡಲಾಗಿದೆ. ಇನ್ನು ಸದಸ್ಯರಾಗಿ ಕನ್ನಡ ಪ್ರಭ ದಿನಪತ್ರಿಕೆ ಪ್ರಧಾನ ವರದಿಗಾರ ಗೋಪಾಲ ಸಿಂಗಪ್ಪಯ್ಯ ಯಡಗೆರೆ, ಕೆ.ಕೆ ಮೂರ್ತಿ, ಶಿವಕುಮಾರ್ ಬೆಳ್ಳಿತಟ್ಟೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮೈಸೂರಿನ ಪತ್ರಕರ್ತರಾದ ಸಿ.ಕೆ ಮಹೇಂದರ್, ಕೂಡ್ಲಿ ಗುರುರಾಜು, ಮಂಗಳೂರಿನ ಜಯಕಿರಣ ದೈನಿಕ ಬಿಜೈನ ಹಿರಿಯ ವರದಿಗಾರರಾದ ಜಗನ್ನಾಥ ಬಾಳ, ಕಲ್ಬುರ್ಗಿಯ ಬುದ್ಧಲೋಕದ ಸಂಪಾದಕರಾದ ದೇವೇಂದ್ರಪ್ಪ ಕಪನೂರು, ಶಿವಮೊಗ್ಗದ ನಮ್ಮನಾಡು ಸಂಪಾದಕರಾದ ಕೆ.ವಿ ಶಿವಕುಮಾರ್ ಅವರನ್ನ ನೇಮಕ ಮಾಡಲಾಗಿದೆ. …. , 26, 2021 (..): .. , . , , , .., , , , , .. , , , , , , , , , , .. , , , .: / / / : - - –