’ನಾಟಕ’ ರಾಜ’ಕಾರಣ’ : ಮತದಾರರ ಚಿತ್ತ ಪ್ರಾದೇಶಿಕ ರಾಜಕೀಯ ಪಕ್ಷಗಳತ್ತ ಹೊರಳಿದೆಯೇ..! ಬೆಂಗಳೂರು, ಜುಲೈ ೨೪, ೨೦೨೧ (..): ಭಾರತದ ರಾಜಕೀಯ ಇತಿಹಾಸದಲ್ಲಿ ಹಲವಾರು ಪ್ರಾದೇಶಿಕ ಪಕ್ಷಗಳು ತಲೆ ಎತ್ತಿವೆ. ಈ ಪೈಕಿ ಹಲವು ಪಕ್ಷಗಳು ರಾಷ್ಟ್ರೀಯ ಪಕ್ಷಗಳನ್ನೂ ಮೀರಿಸಿ ಗಟ್ಟಿನೆಲೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಒರಿಸ್ಸಾ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ, ಹೀಗೆ ಹಲವು ರಾಜ್ಯಗಳಲ್ಲಿ ಜನರು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಶಾಶ್ವತವಾಗಿ ಬಾಗಿಲು ಮುಚ್ಚಿವೆ. ಪ್ರಾದೇಶಿಕ ರಾಜಕೀಯ ಪಕ್ಷಗಳ ಪಾತ್ರ ಹಾಗೂ ಪ್ರಾಮುಖ್ಯತೆ ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಕೇರಳ ಒಳಗೊಂಡಂತೆ ದೇಶದ ಐದು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದಂತಹ ವಿಧಾನಸಭಾ ಚುನಾವಣೆಗಳ ನಂತರ ಮುನ್ನೆಲೆಗೆ ಬಂದಿವೆ. ಬಿಜೆಪಿಯ ಚಾಣಕ್ಯರೆಂದೇ ಪರಿಗಣಿಸಲಾಗುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಅವಿರತ ಪ್ರಯತ್ನಗಳ ಹೊರತಾಗಿಯೂ ಈ ಬಾರಿ ವಿಧಾನಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಎಲ್ಲಾ ಪ್ರಯತ್ನಗಳೂ ಸೋತಿವೆ. ಪಶ್ಚಿಮ ಬಂಗಾಳದಲ್ಲಿ ಬಂಗಾಳದ ಹೆಣ್ಣು ಹುಲಿ ಎಂದೇ ಗುರುತಿಸಲ್ಪಡುವ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ನೆಲಕಚ್ಚಿತು. ತಮಿಳುನಾಡಿನ ಜನರೂ ಸಹ ರಾಷ್ಟ್ರೀಯ ಪಕ್ಷಗಳಿಗಿಂತ ಡಿಎಂಕೆ ಅಥವಾ ಎಐಡಿಎಂಕೆಯಂತಹ ಪ್ರಾದೇಶಿಕ ಪಕ್ಷಗಳ ಕಡೆಗೆ ಹೆಚ್ಚು ಒಲವನ್ನು ಹೊಂದಿರುವುದು ಮುಂಚಿನಿಂದಲೂ ಎಲ್ಲರಿಗೂ ಗೊತ್ತಿರುವ ವಿಷಯವೇ. ದೇಶದ ಅತೀ ದೊಡ್ಡ ರಾಜ್ಯಗಳ ಪೈಕಿ ಒಂದಾಗಿರುವ ತಮಿಳುನಾಡಿನಲ್ಲಿ ಜನರು ಈ ಬಾರಿ ಮತ್ತೊಮ್ಮೆ ಪ್ರಾದೇಶಿಕ ಪಕ್ಷವಾದ ಡಿಎಂಕೆಗೆ ಅಧಿಕಾರವನ್ನು ನೀಡುವ ಮೂಲಕ ಪ್ರಾದೇಶಿಕ ಪಕ್ಷಗಳ ಬಗ್ಗೆ ತಮಗಿರುವ ಪ್ರೀತಿ ಹಾಗೂ ಹೆಮ್ಮೆಯನ್ನು ವ್ಯಕ್ತಪಡಿಸಿರುವಂತಾಗಿದೆ. ಇದರ ಜೊತೆಗೆ ಕೇರಳ ರಾಜ್ಯ ಸಹ ಎಡ ಪಂಥೀಯ ಮುಂದಾಳತ್ವದ ಎಲ್‌ಡಿಎಫ್‌ಗೆ ಅಧಿಕಾರವನ್ನು ನೀಡುವ ಮೂಲಕ ಅನೇಕರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಆದರೆ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳ ಜನರ ತೀರ್ಪು, ಕರ್ನಾಟಕಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವ ಕನಸನ್ನು ಕಾಣುತ್ತಿರುವ ಜೆಡಿಎಸ್ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದೆ.ಕರ್ನಾಟಕದಲ್ಲಿ ಪ್ರಬಲ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಸ್ವಂತ ನೆಲೆಯ ಮೇಲೆ ಅಧಿಕಾರಕ್ಕೆ ಬರುವಲ್ಲಿ ಇತ್ತೀಚಿನ ವರ್ಷಗಳಲ್ಲಿ ವಿಫಲವಾಗುತ್ತಿರುವುದು, ಮತ್ತು ಎರಡು-ಮೂರು ಬಾರಿ ಬಹುಮತ ಲಭಿಸದೆ ಸಮ್ಮಿಶ್ರ ಸರ್ಕಾರ ರಚಿಸಲು ಕಾರಣವಾಗಿರುವುದು ಪಕ್ಷದ ವರಿಷ್ಠರ ಕುಟುಂಬ ಆದ್ಯತೆಯ ರಾಜಕಾರಣವೇ ಕಾರಣ ಎನ್ನುವುದು ಬಹುಪಾಲು ಜನರ ಅಭಿಪ್ರಾಯವಾಗಿದೆ. ಕರ್ನಾಟಕದಲ್ಲಿ ಜೆಡಿಎಸ್ ಒಂದು ಕುಟುಂಬದ ನಿಯಂತ್ರಣದಲ್ಲಿರುವುದೇ ಇದಕ್ಕೆ ಬಹುಮುಖ್ಯ ಕಾರಣ ಎನ್ನಲಾಗುತ್ತದೆ. ತೆಲುಗು ದೇಶಂ, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಬಿಜೆಡಿ, ಆರ್‌ಜೆಡಿ, ಸಮಾಜವಾದಿ ಪಾರ್ಟಿಗಳಂತಲ್ಲದೆ, ಜೆಡಿಎಸ್ ಪಕ್ಷ ರಾಜ್ಯದ ೩೦ ಜಿಲ್ಲೆಗಳ ಪೈಕಿ ಯಾವುದೇ ಜಿಲ್ಲೆಯಲ್ಲಿಯೂ ಉತ್ತಮ ಪ್ರದರ್ಶನ ನೀಡದಿರುವುದು ಇದೇ ಕಾರಣದಿಂದಾಗಿ. ಕರ್ನಾಟಕದಲ್ಲಿರುವ ಹಾಲಿ ವಾತಾವರಣದಡಿ ಮತದಾರರು ಕುಟುಂಬ ನಿಯಂತ್ರಿತ ಪಕ್ಷಕ್ಕೆ ಆದ್ಯತೆ ನೀಡುವ ಯಾವುದೇ ಸೂಚನೆಗಳು ಗೋಚರಿಸುತ್ತಿಲ್ಲ.ಕರ್ನಾಟಕದಲ್ಲಿ ಬಿಜೆಪಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹೊರಗಟ್ಟುವ ಅಭಿಯಾನದಲ್ಲಿ ತಲ್ಲೀನವಾಗಿದ್ದರೆ, ಕಾಂಗ್ರೆಸ್ ಪಕ್ಷದ ನಾಯಕರು ಪ್ರಸ್ತುತ ತಮ್ಮದಲ್ಲದಿರುವ ಮುಖ್ಯಮಂತ್ರಿ ಖುರ್ಚಿಗೆ ಯಾರು ಸೂಕ್ತ ಎಂಬ ಕಿತ್ತಾಟದಲ್ಲಿ ತೊಡಗಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ನ ಶಾಶ್ವತ ಮುಖ್ಯಮಂತ್ರಿ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ ಅವರು ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವೇ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂಬ ಕನಸನ್ನು ಕಾಣುತ್ತಿದ್ದಾರೆ.ಅವರ ಕನಸು ನನಸಾಗುವುದೋ? ಹೆಚ್.ಡಿ. ಕುಮಾರಸ್ವಾಮಿ ಅವರು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಎನ್.ಟಿ. ರಾಮಾರಾವ್, ತಮಿಳುನಾಡಿನ ಎಂ.ಜಿ. ರಾಮಚಂದ್ರನ್, ಚಂದ್ರಶೇಖರ್ ರಾವ್ ಹಾಗೂ ಜಗನ್ ಮೋಹನ್ ರೆಡ್ಡಿ ಅವರಂತೆ ತಮ್ಮ ಶಕ್ತಿಯನ್ನು ರುಜುವಾತುಗೊಳಿಸುವರೋ, ಕಾದು ನೋಡಬೇಕಿದೆ. : - – - - : . , , , , . , . – , . , , , ’ . , ., , , . , . , . , , , , , . ’ . , , , . , - . , ’ 2023 . , , .