ಸರ್ಕಾರಿ ಶಾಲೆಗೆ ನುಗ್ಗಿದ ಕಂಟೈನರ್ ಲಾರಿ. ಮೈಸೂರು,ಜುಲೈ,23,2021(..):ಸರ್ಕಾರಿ ಶಾಲೆಗೆ ಕಂಟೈನರ್ ಲಾರಿ ನುಗ್ಗಿದ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ ಮುಂಜನಹಳ್ಳಿ ಗ್ರಾಮದಲ್ಲಿ ಇಂದು ಬೆಳ್ಳಂ ಬೆಳಗ್ಗೆ ಈ ಘಟನೆ ನಡೆದಿದೆ. ಸರ್ಕಾರಿ ಶಾಲೆಗೆ ಕಂಟೈನರ್ ಲಾರಿ ನುಗ್ಗಿದ ಪರಿಣಾಮ ಶಾಲೆಯ ಕಾಂಪೌಂಡ್ ಹಾಗೂ ಅಡುಗೆ ಮನೆಗೆ ಹಾನಿಯುಂಟಾಗಿದೆ. ಸದ್ಯ ಯಾವುದೇ ಅನಾಹುತ ಸಂಭವಿಸಿಲ್ಲ. ಕಂಟೈನರ್ ಲಾರಿ ಚಾಲಕ ನಿದ್ರೆ ಮಂಪರುನಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. : –- – -