ಬಿಎಸ್ ವೈ ಎರಡು ವರ್ಷ ಸಿಎಂ ಆಗಲು ಹೈಕಮಾಂಡ್ ಜತೆ ಅಗ್ರಿಮೆಂಟ್ ಆಗಿತ್ತು- ರಹಸ್ಯ ಬಿಚ್ಚಿಟ್ಟ ಸಂಸದ ಶ್ರೀನಿವಾಸ್ ಪ್ರಸಾದ್. ಚಾಮರಾಜನಗರ,ಜುಲೈ,23,2021(..):ಸಿಎಂ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡುವ ಬಗ್ಗೆ ಸುಳಿವು ನೀಡಿದ ಬೆನ್ನಲ್ಲೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರು ಸಂಸದರು, ಶಾಸಕರು ವಿರೋಧ ಪಕ್ಷದ ನಾಯಕರು ತಮ್ಮ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಇದೀಗ ಸ್ಪೋಟಕ ರಹಸ್ಯವೊಂದನ್ನ ಬಿಚ್ಚಿಟ್ಟಿದ್ದಾರೆ. ಹೌದು, ಬಿಎಸ್ ಯಡಿಯೂರಪ್ಪ ಎರಡು ವರ್ಷ ಸಿಎಂ ಆಗಲು ಅಗ್ರಿಮೆಂಟ್ ಆಗಿತ್ತು. ಸಮ್ಮಿಶ್ರ ಸರ್ಕಾರದ ಪತನದ ವೇಳೆ ಹೈಕಮಾಂಡ್ ಮತ್ತು ಬಿಎಸ್ ಯಡಿಯೂರಪ್ಪ ನಡುವೆ ಒಪ್ಪಂದವಾಗಿತ್ತು ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಚಾಮರಾಜನಗರದಲ್ಲಿ ಮಾತನಾಡಿರುವ ಶ್ರೀನಿವಾಸ್ ಪ್ರಸಾದ್, ನಿಮಗೆ ವಯಸ್ಸಾಗಿದ್ದರೂ ಅವಕಾಶ ನೀಡುತ್ತೇವೆ. ಎರಡು ವರ್ಷ ಸಿಎಂ ಆಗಿ ಎಂದು ಸಿಎಂ ಬಿಎಸ್ ವೈಗೆ ಹೈಕಮಾಂಡ್ ತಿಳಿಸಿತ್ತು. ಹೀಗಾಗಿ ವಿಶೇಷ ಸಂದರ್ಭದಲ್ಲಿ ಬಿಎಸ್ ವೈ ಸಿಎಂ ಆಗಿದ್ದರು. ಈ ಮಧ್ಯೆ 75 ವರ್ಷ ಆದವರು ಸಿಎಂ ಹುದ್ದೆಯಲ್ಲಿ ಇರಬಾರದು. ಹೀಗಾಗಿ ಸಿಎಂ ಬಿಎಸ್ ಯಡಿಯೂರಪ್ಪ ಒಪ್ಪಂದದಂತೆ ನಡೆದುಕೊಂಡಿದ್ದಾರೆ. ಸಿಎಂ ಬಿಎಸ್ ವೈ ರಾಜೀನಾಮೆ ಒಂದು ಹಂತಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ. …. - : , 23, 2021 (..): , , .. . . .. , . . . 75 ’ . “ , .: / / . / / / / : – – - - --