ರಾಜೀನಾಮೆ ಬಗ್ಗೆ ಸಿಎಂ ಬಿಎಸ್ ವೈ ಸುಳಿವು ಬಗ್ಗೆ ಸಚಿವ ಸಿ.ಪಿಯೋಗೇಶ್ವರ್ ಪ್ರತಿಕ್ರಿಯಿಸಿದ್ದು ಹೀಗೆ. ಚಿಕ್ಕಬಳ್ಳಾಪುರ,ಜುಲೈ,23,2021(..):ರಾಜೀನಾಮೆ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಸುಳಿವು ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಯಾವುದು ಯಾರಿಗೂ ಶಾಶ್ವತವಲ್ಲ. ನಾವೇನು ಶಾಶ್ವತವಾಗಿ ಮಂತ್ರಿಯಾಗಿರುವುದಿಲ್ಲ ಎಂದು ಹೇಳಿದ್ದಾರೆ. ಚಿಕ್ಕಬಳ್ಳಾಪುರದ ನಂದಿ ಗಿರಿದಾಮದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸಿ.ಪಿ ಯೋಗೇಶ್ವರ್, ಸ್ವತಃ ಸಿಎಂ ಬಿಎಸ್ ವೈ ಮಾಧ್ಯಮದ ಮೂಲಕ ನಿಲುವು ತಿಳಿಸಿದ್ದಾರೆ. ಹೈಕಮಾಂಡ್ ಎಲ್ಲವನ್ನೂ ತೀರ್ಮಾನಿಸಲಿದೆ. ನಾನು ನನ್ನ ಸಮಸ್ಯೆ, ನೋವು ಹೇಳಿಕೊಂಡಿದ್ದೆ ಅಷ್ಟೆ ಎಂದರು. ಇದೇ ವೇಳೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧವೂ ಹರಿಹಾಯ್ದ ಸಚಿವ.ಸಿಪಿ ಯೋಗೇಶ್ವರ್, ಹೆಚ್.ಡಿಕೆಯದ್ದು ಸದಾ ದ್ವಂದ್ವ ನಿಲುವು. ಕುಮಾರಸ್ವಾಮಿ ಅವರು ಬೇಕಾದಾಗ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ನಂತರ ಅವರನ್ನೇ ದೂಷಿಸುತ್ತಾರೆ. ಅದಕ್ಕೆ ಅವರನ್ನ ದೂರುವಿಡಿ ಎಂದು ಹೇಳುತ್ತಿರುವೆ. ಹತ್ತಿರಕೊಳ್ಳಬಾರದು. ದೂರುವಿಡಬೇಕು ಎಂದು ಹೇಳಿದ್ದೆ ಎಂದರು. ….. .. ’ , 23, 2021 (..): .. ’ , .. . “ ,” . , , “ . . .” .. . “ . . . . .” .: / / .. / / / : - – -- .