ಅಮೆಜಾನ್ ಪ್ರೈಂನಲ್ಲಿ ನಗೆಯ ಕಚಗುಳಿ ಇಡುವ ‘ಇಕ್ಕಟ್’ ಬೆಂಗಳೂರು, ಜುಲೈ 23, 2021 (..):2 ದಿನಗಳ ಹಿಂದೆಯಷ್ಟೇ ಕನ್ನಡದ ಇಕ್ಕಟ್​​​ ಸಿನಿಮಾ ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗಿದ್ದು, ನಗೆಯ ಕಚಗುಳಿ ಇಡುತ್ತಿದೆ. ಲಾಕ್​ಡೌನ್​ ಸಮಯದಲ್ಲಿ ನಡೆಯುವ ಕಥೆ ಇರುವ ಇಕ್ಕಟ್​​ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಅಮೆಜಾನ್ ಪ್ರೈಂ ನಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ನಾರಪ್ಪ ತಮಿಳಿನ ಹಿಟ್​​ ಸಿನಿಮಾ ಅಸುರನ್​​ ತೆಲುಗಿನಲ್ಲಿ ರಿಮೇಕ್​ ಆಗಿ ನಾರಪ್ಪ ಆಗಿದೆ. ವಿಕ್ಟರಿ ವೆಂಕಟೇಶ್​ ಅದ್ಧುತವಾಗಿ ನಟಿಸಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಅಮೆಜಾನ್ ಪ್ರೈಂ ಜತೆಗೆ ಝೀ, 5, ನೆಟ್ ಫ್ಲಿಕ್ಸ್ ನಲ್ಲೂ ಕೆಲವು ಚಿತ್ರಗಳು ರಿಲೀಸ್ ಆಗಿವೆ. ಈ ಮೂಲಕ ವೀಕೆಂಡ್ನಲ್ಲಿ ಸಿನಿಮಾಗಳ ಭರಾಟೆ ಜೋರಾಗಿದೆ. , Primeನಲ್ಲಿ ಒಳ್ಳೆ ಸಿನಿಮಾ, ವೆಬ್​​ಸೀರಿಸ್​​ಗಾಗಿ ಹುಡುಕಾಡುವವರಿಗೆ ಇಲ್ಲಿದೆ ಬೆಸ್ಟ್ ಆಯ್ಕೆಗಳಾಗಿವೆ.