‘ಕೋಟಿಗೊಬ್ಬ 3’ಗೆ ಕಾದಿರುವ ಕಿಚ್ಚ ಅಭಿಮಾನಿಗಳಿಗೆ ಗುಡ್ ನ್ಯೂಸ್ ಬೆಂಗಳೂರು, ಜುಲೈ 23, 2021 (..):ನಟ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಹೌದು. ನಟ ಸುದೀಪ್, ‘ಕೋಟಿಗೊಬ್ಬ 3′ ಸಿನಿಮಾದ ಡಬ್ಬಿಂಗ್ ಕಾರ್ಯ ಮುಗಿಸಿದ್ದು, ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಟ್ವಿಟ್ಟರ್’ನಲ್ಲಿ ಪೋಸ್ಟ್ ಹಾಕಿರುವ ಸುದೀಪ್, ”ಕೋಟಿಗೊಬ್ಬ 3’ ಸಿನಿಮಾದ ಡಬ್ಬಿಂಗ್ ಕಾರ್ಯ ಪೂರ್ಣಗೊಳಿಸಿದ್ದೇನೆ. ಸತ್ಯ ಮತ್ತು ಶಿವ ಅವರುಗಳು ಶೀಘ್ರವಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ ಚಿತ್ರತಂಡದ ಎಲ್ಲರಿಗೂ ಶುಭವಾಗಲಿ” ಎಂದಿದ್ದಾರೆ. ಸಿನಿಮಾವು ಆಗಸ್ಟ್ ತಿಂಗಳ ಮಧ್ಯ ಭಾಗದಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಈಗಾಗಲೇ ಹಲವು ಬಾರಿ ಸಿನಿಮಾದ ಬಿಡುಗಡೆ ಮುಂದೂಡಲಾಗಿದೆ. ಈ ಬಾರಿ ನಿಗದಿತ ದಿನಾಂಕದಲ್ಲಿಯೇ ಸಿನಿಮಾ ಬಿಡುಗಡೆ ಮಾಡುವ ಗಟ್ಟಿ ನಿಶ್ಚಯವನ್ನು ಚಿತ್ರಂಡ ಮಾಡಿದೆ ಎನ್ನಲಾಗುತ್ತಿದೆ.