ಕೃಷ್ಣಾನದಿ ಪಾತ್ರದಲ್ಲಿ ಭಾರಿ ಮಳೆ ಪ್ರವಾಹ ಹಿನ್ನೆಲೆ: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಿಎಂ ಬಿಎಸ್ ವೈ ಸೂಚನೆ. ಬೆಂಗಳೂರು,ಜುಲೈ23,2021(..):ಕೃಷ್ಣಾನದಿ ಪಾತ್ರದಲ್ಲಿ ಭಾರಿ ಮಳೆ ಪ್ರವಾಹ ಹಿನ್ನೆಲೆ, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಇತ್ತೀಚೆಗೆ ವರುಣನ ಅಬ್ಬರ ಜೋರಾಗಿದ್ದು ನದಿ ಪಾತ್ರಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೃಷ್ಣಾನದಿ ಪಾತ್ರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಈ ಸಂಬಂಧ ಬೆಳಗಾವಿ ಜಿಲ್ಲಾಧಿಕಾರಿಯ ಜತೆ ದೂರವಾಣಿ ಮೂಲಕ ಸಿಎಂ ಬಿಎಸ್ ವೈ ಚರ್ಚಿಸಿದ್ದಾರೆ. ಈ ವೇಳೆ ಹೆಚ್ಚಿನ ನಿಗಾವಹಿಸುವಂತೆ ಜಿಲ್ಲಾಧಿಕಾರಿಗೆ ಸಿಎಂ ಬಿಎಸ್ ವೈ ಸೂಚನೆ ನೀಡಿದ್ದು, ಹೆಚ್ಚಿನ ನೆರವು ಬೇಕಿದ್ದರೇ ಕೂಡಲೇ ಕರೆ ಮಾಡಿ ಎಂದು ತಿಳಿಸಿದ್ದಾರೆ. ಅಲ್ಲದೆ ಪ್ರವಾಹ ಪೀಡಿತ ಇತರ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆಯೂ ಸಿಎಂ ಚರ್ಚಿಸಿದ್ದಾರೆ ಎನ್ನಲಾಗಿದೆ. … : , 23, 2021 (..): , . , .. . , . , . , . .: / .. / / / / / / / : - – - - -