ಸಿಎಂ ಬದಲಾವಣೆ ವಿಚಾರ: ಬಿಎಸ್ ವೈ ಪರ ಸುಬ್ರಹ್ಮಣಿಯನ್ ಸ್ವಾಮಿ ಟ್ವೀಟ್. ಬೆಂಗಳೂರು,ಜುಲೈ,21,2021(.):ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಭಾರಿ ಸದ್ಧು ಮಾಡುತ್ತಿದ್ದು, ನಾಯಕತ್ವ ಬದಲಾವಣೆ ಮಾಡದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪರ ರಾಜ್ಯದ ಹಲವು ಮಠಾಧೀಶರು ನಿಂತಿದ್ದಾರೆ. ಈ ಬೆನ್ನಲ್ಲೆ ಇದೀಗ ರಾಜ್ಯ ಸಭೆ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ಸಹ ಸಿಎಂ ಬಿಎಸ್ ವೈ ಪರ ಟ್ವೀಟ್ ಮಾಡಿದ್ದಾರೆ. ಈ ಸಮಯದಲ್ಲಿ ಬಿಎಸ್ ವೈ ರಾಜೀನಾಮೆ ಸರಿಯಲ್ಲ. ಬಿಎಸ್ ವೈ ರಾಜಿನಾಮೆ ಕೇಳುವುದು ಒಳ್ಳೆಯ ತೀರ್ಮಾನವಲ್ಲ ಎಂದು ರಾಜ್ಯ ಸಭೆ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. : –- - - –