ಸಚಿವ ಮುರುಗೇಶ್ ನಿರಾಣಿ ಬಳಿ 500 ರಿಂದ 1000 ಸಿಡಿಗಳಿವೆ: ಹೀಗೆ ಗಂಭೀರ ಆರೋಪ ಮಾಡಿದ್ದು ಯಾರು ಗೊತ್ತೆ…? ಬೆಂಗಳೂರು.ಜುಲೈ,20.2021(..)ಗಣಿ ಸಚಿವ ಮುರುಗೇಶ್ ನಿರಾಣಿ ಒಬ್ಬ ಸಿಡಿ ಬಾಬಾ. ಅವರ ಬಳಿ 500 ರಿಂದ 1000 ಸಿಡಿಗಳಿವೆ ಎಂದು ಉದ್ಯಮಿ ಆಲಂ ಪಾಷ ಅವರು ಹೊಸಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದ ಜೂತೆ ಮಾತನಾಡಿದ ಉದ್ಯಮಿ ಆಲಂ ಪಾಷ, ಗಣಿ ಸಚಿವ ಎಂದು ಕರೆಸಿಕೊಳ್ಳುವ ಮುರುಗೇಶ್ ನಿರಾಣಿ ಬಳಿ ರಾಜಕಾರಣಿಗಳು ಹಾಗೂ ಪ್ರಮುಖ ನಾಯಕರುಗಳ ಸಿಡಿಗಳು ಇವೆ. ರಾಜಕಾರಣಿಗಳು ಮತ್ತು ಪ್ರಮುಖ ನಾಯಕರುಗಳ 500 ರಿಂದ 1000 ಸಿಡಿಗಳನ್ನು ಸಂಗ್ರಹಿಸಿದ್ದಾರೆ. ಇವರು ಸಿಎಂ ಆದರೆ ಸಿಡಿಗಳನ್ನು ಎಷ್ಟಕ್ಕೆ ಮಾರಾಟ ಮಾಡುತ್ತಾರೆ ಎಂಬುದು ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಮುರುಗೇಶ್ ನಿರಾಣಿ ಅವರು ನಕಲಿ ಹೆಸರು ಮತ್ತು ಖಾತೆ ಮೂಲಕ, ವಿಜಯ ಸೌಹರ್ದ ಕ್ರೇಡಿಟ್ ಬ್ಯಾಂಕ್ ನಲ್ಲಿ ಒಟ್ಟು 8 ಸಾವಿರ ಕೋಟಿ ರೂಪಾಯಿಗಳ ಸಾಲ ಪಡೆದು ವಂಚನೆ ಮಾಡಿದ್ದಾರೆ ಎಂದು ಆಲಂ ಪಾಷ ಗಂಭೀರ ಆರೋಪ ಮಾಡಿದ್ದಾರೆ. : - – 500 1000 - – – -