ಇಂದು ಸಂಜೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ: ತಕರಾರುಗಳಿದ್ದರೆ ಆಗಸ್ಟ್’ನಲ್ಲಿ ಪರೀಕ್ಷೆಗೆ ಅವಕಾಶ ಬೆಂಗಳೂರು, ಜುಲೈ 20, 2021 (..):ಇಂದು ಸಂಜೆ 4.30ಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ಇಂದು ಪ್ರಕಟವಾಗುವ ಫಲಿತಾಂಶದ ಬಗ್ಗೆ ಯಾವುದೇ ವಿದ್ಯಾರ್ಥಿಗೆ ತಕರಾರಿದ್ದರೆ ಅವರಿಗೆ ಮರು ಪರೀಕ್ಷೆ ಬರೆಯಲು ಆಗಸ್ಟ್ ತಿಂಗಳಲ್ಲಿ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಈ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸ್ನೇಹಲ್ ಮಾಹಿತಿ ನೀಡಿದ್ದಾರೆ. ಮೊದಲ ಬಾರಿಗೆ ಪರೀಕ್ಷೆ ಬರೆಯದೇ 6,66,497 ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ಈ ಪೈಕಿ 5,90,153 ಮಂದಿ ಹೊಸ ವಿದ್ಯಾರ್ಥಿಗಳಿದ್ದರೆ, 76,344 ಮಂದಿ ಮರುಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳಿದ್ದಾರೆ. ಸಿಬಿಎಸ್ ಇ ಮಾದರಿಯಲ್ಲಿ ಎಸ್‌ಎಸ್‌ಎಲ್ ಸಿ, ಪ್ರಥಮ ಪಿಯುಸಿ ಅಂಕ ಪರಿಗಣಿಸಿ ಫಲಿತಾಂಶ ನೀಡಲು ಸಿದ್ಧತೆ ಕೈಗೊಳ್ಳಲಾಗಿದ್ದು, ಗ್ರೇಡ್ ಬದಲು ಅಂಕಗಳ ಆಧಾರದಲ್ಲಿ ಫಲಿತಾಂಶ ಹೊರಬೀಳಲಿದೆ. …. 2nd : , , 20, 2021 (..): 4.30 . . 6,66,497 . , 5,90,153 76,344 . 2nd . . .: 2nd / / / 4.30 /