ಮದ್ಯಪಾನ ಸಂಯಮ ಮಂಡಳಿಗೆ ನಟಿ ಶ್ರುತಿ ಅಧ್ಯಕ್ಷೆ ಬೆಂಗಳೂರು, ಜುಲೈ 20, 2021 (..):ಚಿತ್ರನಟಿ ಹಾಗೂ ಬಿಜೆಪಿ ಸದಸ್ಯೆ ಶ್ರುತಿ ಅವರನ್ನು ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಹಿಂದೆ ಅವರನ್ನು ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷರಾಗಿ ನೇಮಿಸಿ ಬಳಿಕ ಆ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ರಾಜ್ಯ ಸರ್ಕಾರ ಈ ಕುರಿತು ಆದೇಶ ಹೊರಡಿಸಿದ್ದು, ರಾಜ್ಯಪಾಲರ ಆದೇಶದ ಅನುಸಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಶ್ರುತಿ ಅವರು ಮದ್ಯಪಾನ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರೆ ಎಂದು ತಿಳಿಸಿದೆ. ಈ ಮೂಲಕ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರನ್ನಾಗಿ ಕಾರ್ಯಚರಣೆ ಆರಂಭಿಸಲಿದ್ದಾರೆ.