ಕ್ರಿಕೆಟ್: ಭಾರತ-ಶ್ರೀಲಂಕಾ ಏಕದಿನ ಸರಣಿಗೆ ಇಂದು ಚಾಲನೆ ಬೆಂಗಳೂರು, ಜುಲೈ 18, 2021 (..):ಭಾರತ ಹಾಗೂ ಶ್ರೀಲಂಕಾ ನಡುವಣ ಏಕದಿನ ಸರಣಿಯ ಮೊದಲನೇ ಪಂದ್ಯ ಇಂದು ನಡೆಯಲಿದೆ. ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಭಾರತದ ಯುವ ಪಡೆ ಸಕಲ ತಯಾರಿಯೊಂದಿಗೆ ಸಜ್ಜಾಗಿದೆ. ಶಿಖರ್ ಧವನ್ ನಾಯಕತ್ವದಲ್ಲಿ ಇಂದು ಈ ತಂಡ ಕಣಕ್ಕಿಳಿಯಲಿದೆ. ಬಲಗೈ ಗಾಯದ ಸಮಸ್ಯೆಯಿಂದ ಕುಸಲ್ ಪೆರೆರ ತಂಡದಲ್ಲಿ ಅಲಭ್ಯರಾಗಿದ್ದಾರೆ. ದಸುನ್ ಶನಾಕ ಶ್ರೀಲಂಕಾ ತಂಡದ ನಾಯಕರಾಗಿದ್ದಾರೆ. ಇಂದಿನಿಂದ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದ್ದು, ಜುಲೈ 25ರಿಂದ ಟಿ ಟ್ವೆಂಟಿ ಸರಣಿ ಆರಂಭವಾಗಲಿದೆ.