ಕೆ ಎಸ್ ಆರ್ ಟಿ ಸಿಯಿಂದ ಜೋಗ ಜಲಪಾತ ಟೂರ್ ಪ್ಯಾಕೇಜ್ ಬೆಂಗಳೂರು, ಜುಲೈ 18, 2021 (..):ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಬೆಂಗಳೂರು ಟು ಜೋಗ ಜಲಪಾತ ಟೂರ್ ಪ್ಯಾಕೇಜ್ ಘೋಷಿಸಿದೆ. ಬೆಂಗಳೂರು ಕೇಂದ್ರೀಯ ವಿಭಾಗದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು – ಜೋಗ ಜಲಪಾತ ವಯಾ ಶಿವಮೊಗ್ಗ, ಸಾಗರ ಮಾರ್ಗವಾಗಿ ನಾನ್ ಎಸಿ ಸ್ಲೀಪರ್ ವಾಹನದೊಂದಿಗೆ ವಾರಾಂತ್ಯದ ದಿನಗಳಲ್ಲಿ (ಶುಕ್ರವಾ ಮತ್ತು ಶನಿವಾರ) ಟೂರ್ ಪ್ಯಾಕೇಜ್ 23-07-2021ರಿಂದ ಪ್ರಾರಂಭವಾಗಲಿದೆ. ಕೆ ಎಸ್ ಆರ್ ಟಿ ಸಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಲತಾ ಟಿ.ಎಸ್ ಈ ಕುರಿತು ಮಾಹಿತಿ ನೀಡಿದ್ದಾರೆ. ಪ್ಯಾಕೇಜ್ಟೂರ್ವೇಳಾಪಟ್ಟಿಹಾಗೂಸಾರಿಗೆಯಪ್ರಯಾಣ ದರದವಿವರಕ್ಕೆ ಕೆಎಸ್ ಆರ್ ಟಿಸಿ ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.