ಮೈಸೂರು ಮಹಾರಾಣಿಯರ ಗೌರವಾರ್ಥ ಫೋಟೋಶೂಟ್’ನಲ್ಲಿ ರಂಜನಿ ಮಿಂಚು! ಬೆಂಗಳೂರು, ಜುಲೈ 15, 2021 (..):ಮೈಸೂರು ಮಹಾರಾಣಿಯರ ಗೌರವಾರ್ಥವಾಗಿ ಮಾಡಿದ ಫೋಟೋಶೂಟ್​ನಲ್ಲಿ ನಟಿ ರಂಜನಿ ರಾಘವನ್​ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ಪುಟ್ಟಗೌರಿಯಾಗಿ ನಂತರ ಕನ್ನಡತಿ ಧಾರವಾಹಿ ಮೂಲಕ ಗಮನ ಸೆಳೆದು ಇದೀಗ ಸಿನಿಮಾದಲ್ಲೂ ತಮ್ಮದೇ ಛಾಪು ಮೂಡಿಸುತ್ತಿರುವ ರಂಜನಿ ಮೈಸೂರಿನ ಮಹಾರಾಣಿಯರ ಪೋಷಾಕಿನಲ್ಲಿ ಕಾಣಿಸಿಕೊಂಡಿದ್ದಾರೆ. ಮೈಸೂರು ಮಹಾರಾಣಿಯರ ಗೌರವಾರ್ಥವಾಗಿ ಮಾಡಿರುವ ಫೋಟೋಶೂಟ್​ನಲ್ಲಿ ಮಹಾರಾಣಿಯಾಗಿ ವಿಭಿನ್ನಲುಕ್​ಗಳಲ್ಲಿ ಪೋಸ್​ ಕೊಟ್ಟಿದ್ದಾರೆ. ಅಂದಹಾಗೆ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದಲ್ಲಿ ದಿಗಂತ್​ ಹಾಗೂ ಐಂದ್ರಿತಾ ರೇ ಜೊತೆ ನಟಿಸಿದ್ದಾರೆ.