ಉಡುಪಿಗೆ ಶೀಘ್ರದಲ್ಲೇ ಮೆಡಿಕಲ್ ಕಾಲೇಜು- ಸಚಿವ ಡಾ.ಕೆ.ಸುಧಾಕರ್ ಭರವಸೆ. ಉಡುಪಿ,ಜುಲೈ,14,2021(..):ಶೀಘ್ರದಲ್ಲೇ ಉಡುಪಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದ್ದಾರೆ. ಉಡುಪಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುಧಾಕರ್, ರಾಜ್ಯದ 10 ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜುಗಳಿವೆ. ಉಡುಪಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಿಎಂ ಸೂಚಿಸಿದ್ದಾರೆ. ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲಾಗುವುದು ಎಂದರು. ರಾಜ್ಯದಲ್ಲಿ 2.60 ಕೋಟಿ ಲಸಿಕೆ ಹಾಕಲಾಗಿದೆ. ಕೋವಿಡ್ 3ನೇ ಅಲೆ ಭೀತಿ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಕೋವಿಡ್ ರೂಲ್ಸ್ ಪಾಲಿಸಿದರೆ ಯಾವುದೇ ಅಲೆ ಬರಲ್ಲ. ಜನರು ತಪ್ಪದೆ ನಿಯಮ ಪಾಲಿಸಬೇಕು. ಈಗಾಗಲೇ ರಾಜ್ಯದಲ್ಲಿ 2.60 ಕೋಟಿ ಲಸಿಕೆ ಹಾಕಲಾಗಿದೆ. ಇನ್ನು 2 ರಿಂದ 3 ಕೋಟಿ ಲಸಿಕೆ ಹಾಕಿದರೇ ಎಲ್ಲರಿಗೂ ಒಂದು ಡೋಸ್ ಫೂರ್ಣವಾಗುತ್ತದೆ. ಹಾಗಾಗಿ ಯಾವುದೇ ಅಲೆ ಪ್ರಭಾವ ಬೀರಲ್ಲ. ಲಸಿಕೆ ಪೂರ್ಣ ಆಗುವವರೆಗೆ ನಿಯಮ ಪಾಲಿಸಿ ಎಂದು ಸೂಚಿಸಿದರು. : –-- -