ಹಿಂದಿನಿಂದಲೂ ಜಾತಿ ಜನಗಣತಿಗೆ ವಿರೋಧ: ನಿಲುವಿಗೆ ಬದ್ಧ-ಶಾಸಕ ಶಾಮನೂರು ಶಿವಶಂಕರಪ್ಪ ದಾವಣಗೆರೆ,ಅಕ್ಟೋಬರ್,7,2024 (..):ಜಾತಿ ಜನಗಣತಿಗೆ ವೀರಶೈವ ಲಿಂಗಾಯತ ಮಹಾಸಭಾ ಹಿಂದಿನಿಂದಲೂ ವಿರೋಧಿಸಿದೆ ಈಗಲೂ ಇದೇ ನಿಲುವಿಗೆ ಬದ್ಧ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಈ ಕುರಿತು ಇಂದು ಮಾತನಾಡಿದ ಶಾಸಕ ಶಾಮನೂರು ಶಿವಶಂಕರಪ್ಪ, ಜಾತಿಗಜನಗಣತಿಗೆ ಹಿಂದಿನಿಂದಲೂ ವಿರೋಧಿಸಿಲಾಗಿದೆ. ಈಗಲೂ ವಿರೋಧಿಸುತ್ತೇವೆ ಎಂದು ತಿಳಿಸಿದರು. ಇದೇ ವೇಳೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಶಾಸಕ ಶಾಮನೂರು ಶಿವಶಂಕರಪ್ಪ, ಬಿಜೆಪಿಯಲ್ಲಿ ಒಂದು ಕಡೆ ಬಿಎಸ್ ಯಡಿಯೂರಪ್ಪ ಬಣ, ಇನ್ನೊಂದು ಕಡೆ ಬಸನಗೌಡ ಪಾಟೀಲ್ ಯತ್ನಾಳ್ ಬಣ ಇದೆ. ಇದನ್ನು ಜನರು ನೋಡಿದ್ದಾರೆ. ಕಾಂಗ್ರೆಸ್ ನಲ್ಲಿ ಅಂತಹ ಯಾವುದೂ ಇಲ್ಲ.‌ ನಮ್ಮದು ಶಿಸ್ತಿನ ಪಕ್ಷ ಎಂದರು. : , ,