ಮಾಜಿ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನಿವಾಸಕ್ಕೆ ಭೇಟಿ ನೀಡಿ ಉಪಹಾರ ಸೇವಿಸಿದ ಸಚಿವ ಸತೀಶ್ ಜಾರಕಿಹೊಳಿ ಮೈಸೂರು,ಅಕ್ಟೋಬರ್,8,2024 (..):ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಇಂದು ದಿಢೀರ್ ಮೈಸೂರು ಪ್ರವಾಸ ಕೈಗೊಂಡಿದ್ದು ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ ನಿವಾಸಕ್ಕೆ ಭೇಟಿ ನೀಡಿ ಉಪಹಾರ ಸೇವಿಸಿದರು. ನಗರದ ಸುಣ್ಣದಕೇರಿ ಬಡಾವಣೆಯಲ್ಲಿರುವ ಆಪ್ತ ಲೋಕೇಶ್ ಪಿಯಾ ಅವರ ನಿವಾಸಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿದ್ದು, ಬಡಾವಣೆ ನಿವಾಸಿಗಳು ಅದ್ದೂರಿ ಸ್ವಾಗತ ಕೋರಿದರು. ಪಟಾಕಿ ಸಿಡಿಸಿ, ಹಾರ ತುರಾಯಿ ಹಾಕಿ ಲೋಕೇಶ್ ಪಿಯಾ ಮತ್ತು ಬೆಂಬಲಿಗರು ಸ್ವಾಗತಿಸಿದರು. ಸಚಿವ ಸತೀಶ್ ಜಾರಕಿಹೊಳಿಗೆ ಹಲವು ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದು, ನಂತರ ಸತೀಶ್ ಜಾರಕಿಹೊಳಿ ದೋಸೆ,ಅಕ್ಕಿ ರೊಟ್ಟಿ, ಜಟ್ನಿಪುಡಿ ಉತ್ತರ ಕರ್ನಾಟಕದ ಶೈಲಿಯ ಉಪಾಹಾರ ಸೇವಿಸಿದರು. ಈ ವೇಳೆ ಅಲ್ಲಿದ್ದ ಬೆಂಬಲಿಗರು ಸಾರ್ವಜನಿಕರು ಸತೀಶ್ ಜಾರಕಿಹೊಳಿ ಅವರನ್ನ ನೋಡಲು ಮುಗಿಬಿದ್ದ ಘಟನೆ ನಡೆಯಿತು. ಮೈಸೂರು ಭಾಗದ ಸಚಿವರು, ಶಾಸಕರ‌ ಭೇಟಿಗೂ ಸತೀಶ್ ಜಾರಕಿಹೊಳಿ ತಯಾರಿ ನಡೆಸಿದ್ದು ಸಚಿವ ಡಾ.ಎಚ್.ಸಿ.ಮಹದೇವಪ್ಪ ನಿವಾಸಕ್ಕೆ ತೆರಳಲಿದ್ದಾರೆ. : , , , , ,