ಹ್ಯಾಟ್ರಿಕ್ ಹೀರೊಶಿವಣ್ಣಗೆ ಇಂದು ಜನ್ಮ ದಿನದ ಸಂಭ್ರಮ ಬೆಂಗಳೂರು, ಜುಲೈ 12, 2021 (..): ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರಿಗೆ ಇಂದು 59ನೇ ವರ್ಷದ ಹುಟ್ಟುಹಬ್ಬ ಸಂಭ್ರಮ. ಹುಟ್ಟುಹಬ್ಬಕ್ಕಿಂತಲೂ ಆರೋಗ್ಯ ಮುಖ್ಯ ಯಾರೂ ಸಹ ಈ ಬಾರಿ ನನ್ನ ಹುಟ್ಟುಹಬ್ಬ ಆಚರಣೆ ಮಾಡುವುದು ಬೇಡ ಎಂದು ಈ ಮೊದಲೇ ಶಿವಣ್ಣ ಹೇಳಿದ್ದರು. ಶಿವರಾಜ್ ಕುಮಾರ್ ಹುಟ್ಟುಹಬ್ಬದ ಸಂದರ್ಭ ಇಂದು ಶಿವರಾಜ್ ಕುಮಾರ್ ಅಭಿನಯದ ಹಲವು ಸಿನಿಮಾಗಳ ಹೆಸರು ಘೋಷಣೆ, ಟೀಸರ್ ಬಿಡುಗಡೆ ಆಗಲಿದೆ. ರಿಷಬ್ ಶೆಟ್ಟಿ, ಶಿವಣ್ಣನಿಗಾಗಿ ನಿರ್ದೇಶಿಸಲಿರುವ ಹೊಸ ಸಿನಿಮಾದ ಟೈಟಲ್ ಸಹ ಇಂದೇ ಘೋಷಣೆ ಆಗಲಿದೆ.