ಬನ್ನಿ ವಿಸ್ಟಾಡೋಮ್ ಟ್ರೈನಿನಲ್ಲಿ ಕುಳಿದು ಪಶ್ಚಿಮಘಟ್ಟದ ಸೌಂದರ್ಯ ಸವಿಯಿರಿ! ಮಂಗಳೂರು-ಬೆಂಗಳೂರು ವಿಸ್ಟಾಡೋಮ್ ರೈಲು ಸಂಚಾರ ಶುರು ಬೆಂಗಳೂರು, ಜುಲೈ 11, 2021 (..):ಮಂಗಳೂರು-ಬೆಂಗಳೂರು ನಡುವಣ ಪ್ರಕೃತಿಯ ದೃಶ್ಯಗಳನ್ನು ವೀಕ್ಷಿಸಲು ಅನುಕೂಲವುಳ್ಳ ರಾಜ್ಯದ ಮೊದಲ ವಿಸ್ಟಾಡೋಮ್ ಕೋಚ್ ರೈಲಿಗೆ ಹಸಿರು ನಿಶಾನೆ ಸಿಕ್ಕಿದೆ. ಮಂಗಳೂರಿನಲ್ಲಿ ವಿಸ್ಟಾಡೋಮ್ ರೈಲಿಗೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದ್ದಾರೆ. ಈ ಮಾರ್ಗದಲ್ಲಿ ಧಾರ್ಮಿಕ ಹಾಗೂ ಪ್ರಾಕೃತಿಕ ಅನುಭವಗಳು ಪ್ರವಾಸಿಗರಿಗೆ ಖುಷಿ ಕೊಡುತ್ತದೆ. ಮಂಗಳೂರಿಗೆ 2 ಕೋಚ್ ಗಳನ್ನು ಕೊಟ್ಟಿದ್ದಾರೆ. ಇದರಲ್ಲಿ 40 ಆಸನಗಳಿದ್ದು, ದಿವ್ಯಾಂಗರಿಗೆ ಪ್ರತ್ಯೇಕವಾಗಿರುವ ವ್ಯವಸ್ಥೆ ಇರಲಿದೆ. ಮೆಟ್ರೋ ರೈಲಿನ ಹಾಗೆ ಇಲ್ಲಿ ಮಾಹಿತಿ ನೀಡುವ ವ್ಯವಸ್ಥೆ ಇದೆ.