UPSCಯಿಂದ ಹೊಸ ಅಧಿಸೂಚನೆ ಪ್ರಕಟ: ಸೆ.5ರಂದು ಪರೀಕ್ಷೆ ಬೆಂಗಳೂರು, ಜುಲೈ 11, 2021 (..):ಇಪಿಎಫ್‌ಒ ಪರೀಕ್ಷೆಗೆ ಸಂಬಂಧಿಸಿದಂತೆ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಹೊಸ ಅಧಿಸೂಚನೆ ಹೊರಡಿಸಿದೆ. ಜಾರಿ ಅಧಿಕಾರಿ ಮತ್ತು ಖಾತೆ ಅಧಿಕಾರಿ ಹುದ್ದೆಗಳನ್ನ ಭರ್ತಿ ಮಾಡಲು ಈ ಪರೀಕ್ಷೆಯನ್ನ ನಡೆಸಲಾಗುತ್ತಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, ಪರೀಕ್ಷೆಯನ್ನ 5 ಸೆಪ್ಟೆಂಬರ್ 2021 ರಂದು ನಡೆಯಲಿದೆ. ಈ ಬಾರಿ ಇಪಿಎಫ್‌ಒ ಪರೀಕ್ಷೆಗೆ ವಿಶೇಷ ಮಾರ್ಗಸೂಚಿಗಳನ್ನು ನೀಡಲಾಗಿದೆ. ಅದರ ಪ್ರಕಾರ ಪರೀಕ್ಷಾ ಕೇಂದ್ರವನ್ನ ಬದಲಾಯಿಸುವ ಯಾವುದೇ ಅಭ್ಯರ್ಥಿಯ ಕೋರಿಕೆಯನ್ನ ಪರಿಗಣಿಸಲಾಗುವುದಿಲ್ಲ. ಕೊರೊನಾ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಆಯೋಗವು ಅದನ್ನು ಮುಂದಿನ ಅಧಿಸೂಚನೆಯವರೆಗೆ ಮುಂದೂಡಿತ್ತು.