ಜುಲೈ 12ರಂದು ಶಿವಣ್ಣ ಬರ್ತ್ ಡೇ: ಭಜರಂಗಿ 2 ಟೀಸರ್ ರಿಲೀಸ್ ಬೆಂಗಳೂರು, ಜುಲೈ 10, 2021 (..):ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಕಾದಿದೆ ! ಹೌದು. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಬರ್ತ್ ಡೇಗೆ ಭಜರಂಗಿ 2 ಟೀಸರ್ ಬಿಡುಗಡೆಯಾಗಲಿದೆ. ಚಿತ್ರತಂಡದಿಂದ ಈ ಮಾಹಿತಿ ಸಿಕ್ಕಿದೆ. ಅಂದಹಾಗೆ ಕೊರೋನಾ ಕಾರಣದಿಂದ ಶಿವಣ್ಣ ಈ ಬಾರಿ ಅಭಿಮಾನಿಗಳೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳಲ್ಲ ಎಂದು ಈ ಮೊದಲೇ ಹೇಳಿದ್ದರು. ಹರ್ಷ ನಿರ್ದೇಶನದ ಭಜರಂಗಿ 2 ಟೀಸರ್ ಜುಲೈ 12 ರಂದು ಲಾಂಚ್ ಆಗಿ ಅಭಿಮಾನಿಗಳಿಗೆ ಖುಷಿ ಕೊಡಲಿದೆ.