ನಟ ದುನಿಯಾ ವಿಜಯ್ ಅವರ ತಾಯಿ ನಿಧನ. ಬೆಂಗಳೂರು,ಜುಲೈ,8,2021(..):ಅನಾರೋಗ್ಯದಿಂದ ಬಳಲುತ್ತಿದ್ದ ನಟ ದುನಿಯಾ ವಿಜಯ್‌ ಅವರ ತಾಯಿ ನಾರಾಯಣಮ್ಮ(80) ನಿಧರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಟ ದುನಿಯಾ ವಿಜಯ್‌ ಅವರ ತಾಯಿ ನಾರಾಯಣಮ್ಮ ಬ್ರೈನ್ ಸ್ಟ್ರೋಕ್ ಗೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಈ ನಡುವೆ ಚಿಕಿತ್ಸೆ ಫಲಿಸದೆ ನಾರಾಯಣಮ್ಮ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೇ ದುನಿಯಾ ವಿಜಯ್ ಅವರ ತಾಯಿಗೆ ಕೊರೋನಾ ಸೋಂಕು ತಗುಲಿತ್ತು. ನಾರಾಯಣಮ್ಮ ಅವರಿಗೆ ಮನೆಯಲ್ಲೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಕೊಡಿಸಲಾಗಿತ್ತು. ಕೊರೋನಾದಿಂದ ಚೇತರಿಸಿಕೊಂಡಿದ್ದರು ಎನ್ನಲಾಗಿದೆ. : - ’- -