ಹಸಿದವನಿಗೆ ಅನ್ನದಷ್ಟೇ ಶೋಷಿತರಿಗೆ ಮೀಸಲಾತಿ ಮುಖ್ಯ, ಮೀಸಲಾತಿಯ ನೈಜ ಸದ್ಬಳಕೆಯಾಗಲಿ: ಮೈವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ಮೈಸೂರು, ಜುಲೈ 08, 2021 (..):ಮೀಸಲಾತಿ ಚರ್ಚೆಯನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಕಟ್ಟುವುದು ಹೋರಾಟಗಾರರು ಹಾಗೂ ನಾಯಕರ ನಿಲುವಾಗಬೇಕಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ಅಭಿಪ್ರಾಯಪಟ್ಟರು. ಮೈಸೂರು ವಿವಿ ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಆಯೋಜಿಸಿದ್ದ ‘ಹಿಂದುಳಿದ ವರ್ಗಗಳ ಮೀಸಲಾತಿ ಹಾಗೂ ರಾಜಕಾರಣ’ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯವೇ ಮೀಸಲಾತಿಯ ತತ್ವವಾಗಿದೆಯೇ ವಿನಃ ಬಾಲಢ್ಯತ ಪ್ರಾತಿನಿಧ್ಯವಲ್ಲ. ಮೀಸಲಾತಿಯ ಸೈದ್ಧಾಂತಿಕ ಚಿಂತನೆಗಳಲ್ಲಿ ಮತ್ತು ಅದನ್ನು ಕಾರ್ಯಗತಗೊಳಿಸುವ ಬದ್ಧತೆಯ ಹಾದಿಯಲ್ಲಿ ರಾಜಕಾರಣ ಸಲ್ಲದು ಎಂಬುದನ್ನು ನಾವೆಲ್ಲರೂ ಮನಗಾಣಬೇಕಿದೆ ಎಂದು ಹೇಳಿದರು. ಹಸಿದವನಿಗೆ ಅನ್ನ ಎಷ್ಟು ಮುಖ್ಯವೋ ಅದೇ ಮಾನದಂಡದಲ್ಲಿ ಶೋಷಿತರಿಗೆ ಬದುಕು ಕಟ್ಟಿಕೊಡುವುದೇ ಮೀಸಲಾತಿಯ ಪ್ರಮುಖ ಉದ್ದೇಶವಾಗಿದೆ. ಮೀಸಲಾತಿ ಒಂದು ಅವಶ್ಯಕವಾಗಿದೆ. ಅದನ್ನು ಅತೀ ಅಗತ್ಯವಿರುವವರಿಗೆ ಮೀಸಲಿಡಬೇಕಿದೆ. ಮೀಸಲಾತಿ ಚರ್ಚೆಯಲ್ಲಿ ಮೆರಿಟ್ ಹಾಗೂ ಕೋಟಾ ಪ್ರಧಾನವಾಗಿವೆ ಎಂದರು. ಇಂದು ದೇಶಾದ್ಯಂತ ಮೀಸಲಾತಿ ಕೂಗು ಎದ್ದಿದೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸರಕಾರಗಳ ನಿರ್ಧಾರಗಳನ್ನು ನ್ಯಾಯಾಂಗ ವಿಮರ್ಶಿಸುವ ರೀತಿಗಳನ್ನು ನೋಡಿದಾಗ ಹೊಸ ಆಯಾಮಗಳನ್ನು ಅನ್ವೇಶಿಸುವ ಕಡೆ ಸಾಗಬೇಕಾದ ಅನಿವಾರ್ಯತೆ ಇದೆ. ಮೀಸಲಾತಿಯ ನೈಜ ಸದ್ಬಳಕೆ, ಅರ್ಥಪೂರ್ಣ ಚರ್ಚೆಗಳು ಶೈಕ್ಷಣಿಕ ವಲಯದಲ್ಲಿ ಹೆಚ್ಚಾಗಿ ನಡೆಯಬೇಕಿದೆ ಎಂದು ಹೇಳಿದರು. ಮೈಸೂರು ವಿವಿ ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಬಸವರಾಜ ದೇವನೂರ ಅಧ್ಯಕ್ಷತೆ ವಹಿಸಿದ್ದರು. ಡಿ.ದೇವರಾಜ ಅರಸು ಪೀಠದ ಸಂದರ್ಶಕ ಪ್ರಾಧ್ಯಾಪಕರಾದ ಕೆ.ಎನ್.ಲಿಂಗಪ್ಪ ಅವರು ವಿಶೇಷ ಉಪನ್ಯಾಸ ನೀಡಿದರು. ಮೈಸೂರು ವಿವಿ ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್ ಇತರರು ಇದ್ದರು. ….. , , : , 8, 2021 (..): “ ,” . . , -, . , “ ,’ , . “ . . , ,” .“ , . . , . ,” . , , , , . .. , , . . . . , , , .: / . . / / / /