ಕೇಂದ್ರ ಸಂಪುಟದ ನೂತನ ಸಚಿವರ ಪದಗ್ರಹಣ : ಪ್ರಮಾಣ ವಚನ ಸ್ವೀಕಾರ. ನವದೆಹಲಿ,ಜುಲೈ,7,2021(..):ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನರಚನೆಯಾಗಿದ್ದು 43 ನೂತನ ಸಚಿವರು ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನೂತನ ಕೇಂದ್ರ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುತ್ತಿದ್ದು, ನೂತನ ಕೇಂದ್ರ ಸಚಿವರಿಗೆ ರಾಷ್ಟ್ರಪತಿ ರಮನಾಥ್ ಕೋವಿಂದ್ ಪ್ರತಿಜ್ಞಾವಿಧಿ ಬೋಧಿಸಿದರು. ಕೇಂದ್ರ ಸಚಿವರಾಗಿ ನಾರಾಯಣ ರಾಣೆ ಸರ್ಬಾನಂದ್ ಸೋನಾವಾಲ್, ಡಾ.ವೀರೇಂದ್ರ ಕುಮಾರ್, ಜೋತಿರಾದಿತ್ಯ, ಸಿಂಧ್ಯಾ, ಆರ್.ಪಿ ಸಿಂಗ್, ಅಶ್ವಿನಿ ವೈಷ್ಣವ್, ಪಶುಪತಿ ಕುಮಾರ್ ಪಾರಸ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕರ್ನಾಟಕ ರಾಜ್ಯದವರಾದ ಸಂಸದ ಎ.ನಾರಾಯಣಸ್ವಾಮಿ, ಸಂಸದೆ ಶೋಭಾಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಭಗವಂತ ಖೂಬಾ ನೂತನ ಕೇಂದ್ರ ಸಚಿವರಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ನೂತನ ಕೇಂದ್ರ ಸಚಿವರ 43 ಮಂದಿಯ ಪಟ್ಟಿ ಈ ಕೆಳಕಂಡಂತಿದೆ. 23.ಮೀನಾಕಾಶಿ ಲೇಖಿ24.ಪೂರ್ಣಾ ದೇವಿ25. ಎ. ನಾರಾಯಣಸ್ವಾಮಿ26. ಕೌಶಲ್ ಕಿಶೋರ್27. ಅಜಯ್ ಭಟ್28. ಬಿ.ಎಲ್. ವರ್ಮಾ29.ಅಜಯ್ ಕುಮಾರ್30. ಚೌಹಾಣ್ ದೇವುಸಿನ್ಹ್31. ಭಗವಂತಖುಬಾ32. ಕಪಿಲ್ ಮೊರೇಶ್ವರ ಪಾಟೀಲ್33. ಸುಶ್ರಿ ಪ್ರತಿಮಾ ಭೌಮಿಕ್34.ಡಾ. ಸುಭಾಷ್ ಸರ್ಕಾರ್35.ಡಾ. ಭಾಗ್ವತ್ ಕಿಶನ್ ರಾವ್ ಕಾರಡ್36.ಡಾ. ರಾಜ್ ಕುಮಾರ್ ರಂಜನ್ ಸಿಂಗ್37.ಡಾ.ಭಾರತಿ ಪ್ರವೀಣ ಪವಾರ್38. ಬಿಶ್ವೇಶ್ವರ್ ತುಡು39. ಶಂತನು ಠಾಕೂರ್40.ಮುಂಜಾಪರ ಮಹೇಂದ್ರಭಾಯಿ ಡಾ.41. ಜಾನ್ ಬಾರ್ಲಾ42.ಡಾ.ಎಲ್.ಮುರುಗನ್43. ನಿಸಿತ್ ಪ್ರಮಾನಿಕ್ : - -- - -