ಎನ್. ಟಿ.ಎಂ ಶಾಲೆ / ಸ್ಮಾರಕ ನಿರ್ಮಾಣ ವಿಚಾರ: ತಮ್ಮ ನಿಲುವು ಸ್ಪಷ್ಟಪಡಿಸದ ಸಚಿವ ಎಸ್ ಟಿ ಸೋಮಶೇಖರ್. ಮೈಸೂರು,ಜುಲೈ,6,2021(..):ನಗರದಲ್ಲಿ ಎನ್ ಟಿಎಂ ಶಾಲೆ / ಸ್ಮಾರಕ ನಿರ್ಮಾಣ ವಿಚಾರದಲ್ಲಿ ಹೋರಾಟ ನಡೆಯುತ್ತಿದ್ದರೂ ಈ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಗೆ ಮಾಹಿತಿ ಕೊರತೆ ಇದೆಯೇ ಎನ್ನಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿಯ ಕೂಗುಳತೆಯ ದೂರದಲ್ಲೇ ನಡೆಯುತ್ತಿರುವ ಸದ್ದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೇಳುತ್ತಿಲ್ಲವೇ..? ಹೌದು ಶಾಲೆ / ಸ್ಮಾರಕ ನಿರ್ಮಾಣ ವಿಚಾರದಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಜಾರಿಕೆ ಉತ್ತರ ನೀಡಿದ್ದಾರೆ. ಎನ್. ಟಿ.ಎಂ ಶಾಲೆ ಹೋರಾಟ ವಿಚಾರದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸದ ಸಚಿವ ಎಸ್ ಟಿ ಸೋಮಶೇಖರ್ ಶಾಲೆಯ ಹೋರಾಟದ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲದೆ ಮಾತನಾಡುವುದು ಸರಿಯಲ್ಲ. ಸಂಪೂರ್ಣ ಮಾಹಿತಿ ಇಲ್ಲದೆ ನಾನು ಯಾವುದನ್ನು ಮಾತನಾಡುವುದಿಲ್ಲ ಎಂದು ಸಮಜಾಯಿಸಿ ನೀಡಿದ್ದಾರೆ. ಶಾಲೆ ಉಳಿಯೋ ಬೇಕೋ ಅಥವಾ ಬೇಡವೋ ಎಂಬ ಪ್ರಶ್ನೆಗೂ ಉತ್ತರಿಸದೆ ಸಚಿವ ಎಸ್ ಟಿ ಸೋಮಶೇಖರ್ ಸಬೂಬು ಹೇಳಿದ್ದಾರೆ. : / – - -