‘ಹಮಾರಾ ಕುತ್ತಾ ಹಮಾರಾ ಗಲ್ಲಿ ಮೇ ಶೇರ್’ ಅಂತಾರಲ್ಲ ಅದೇ ರೀತಿ ಸಿಎಂ ಬಿಎಸ್ ವೈ- ಸಿದ್ಧರಾಮಯ್ಯ ಟೀಕೆ. ಬೆಂಗಳೂರು,ಜುಲೈ,5,2021(..):ಸಿಎಂ ಬಿಎಸ್ ಯಡಿಯೂರಪ್ಪ ಕೇಂದ್ರದ ಬಳಿ ಮಾತನಾಡುವುದೇ ಇಲ್ಲ. ‘ಹಮಾರಾ ಕುತ್ತಾ ಹಮಾರಾ ಗಲ್ಲಿ ಮೇ ಶೇರ್’ ಅಂತಾರಲ್ಲ ಅದೇ ರೀತಿ ಸಿಎಂ ಬಿಎಸ್ ವೈ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದರು. ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ‘ಕುತ್ತಾ’ ಎಂದು ಕರೆಯುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳಿಗೆ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಸಿಎಂ ಬಿಎಸ್ ಯಡಿಯೂರಪ್ಪನವರು ಪ್ರಧಾನಿ ನರೇಂದ್ರ ಮೋದಿ ಮುಂದೆ ಯಾವುದೇ ಮಾತನ್ನೂ ಆಡಲ್ಲ, ಅವರ ಮುಂದೆ ಉಸಿರೂ ಎತ್ತಲ್ಲ. ರಾಜ್ಯದಲ್ಲಿ ಮಾತ್ರ ಇವರ ಸ್ಥಿತಿ ಹೇಗಿದೆ ಎಂದರೆ ಹಮಾರಾ ಕುತ್ತಾ ಹಮಾರಾ ಗಲ್ಲಿ ಮೇ ಶೇರ್ ಎಂಬಂತಾಗಿದೆ ಎಂದು ಕಿಡಿಕಾರಿದರು. ರಾಜ್ಯಕ್ಕೆ ಬರಬೇಕಿರುವ ಅನುದಾನವನ್ನ ಬಿಡುಗಡೆ ಮಾಡುವಂತೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬಳಿ ಕೇಳಬೇಕು. ಆದರೆ ಸಿಎಂ ಸಂಸದರಿಂದ ಹಿಡಿದು ಯಾರೋಬ್ಬರಿಗೂ ಅನುದಾನ ಕೇಳುವ ಧೈರ್ಯವೇ ಇಲ್ಲ. ಇವರೆಲ್ಲಾ ಕೇಂದ್ರದ ಎದರು ಮೂಕರಾಗಿದ್ದಾರೆಯೇ ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು. : - - -