ಸಿಎಂ ಬಿಎಸ್ ವೈ ವಿರುದ್ಧ ಹೇಳಿಕೆ ನೀಡುತ್ತಿರುವ ಶಾಸಕರ ಬಗ್ಗೆ ಸಚಿವ ಎಸ್.ಟಿ ಸೋಮಶೇಖರ್ ಕಿಡಿ. ಮೈಸೂರು,ಜುಲೈ,5,2021(..):ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಹೇಳಿಕೆ ನಿಡುತ್ತಿರುವ ಸ್ವಪಕ್ಷದ ಶಾಸಕರ ಬಗ್ಗೆ ಸಚಿವ ಎಸ್‌ಟಿ ಸೋಮಶೇಖರ್ ಫುಲ್ ಗರಂ ಆಗಿದ್ದಾರೆ. ಬಿಎಸ್ ವೈ ಧೂಳಿಗೆ ಸಮವಿಲ್ಲದವರು ಸುಮ್ಮನೆ ಆರೋಪ ಮಾಡುತ್ತಾರೆ. ಹೀಗೆ ಮಾತನಾಡೋರು ಬಿಎಸ್ ವೈ ಧೂಳಿನ ಸಮವಿಲ್ಲ. ಯಡಿಯೂರಪ್ಪನವ್ರ ಧೂಳಿಗೂ ಸಮನಾಗಿಲ್ಲದವ್ರು ,ಯಡಿಯೂರಪ್ಪ ಅವ್ರನ್ನು ದಿನ ಬೆಳಗಾದ್ರೆ ಟೀಕಿಸುತ್ತಿದ್ದಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಕಿಡಿಕಾರಿದರು. ಮೈಸೂರಿನ ಸುತ್ತೂರು ಮಠದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಸೋಕಾಲ್ಡ್ ಲೀಡರ್ ಹೇಳುತ್ತಿದ್ದಾರೆ. ನಮ್ಮಿಂದ ಸರ್ಕಾರ ಬಂತು, ನಮ್ಮಿಂದ ಸರ್ಕಾರ ಬಂತು ಎಂದು ಪದೇ ಪದೇ ಕೆಲವರು ಹೇಳುತ್ತಿದ್ದಾರೆ. ಸ್ವಲ್ಪನಾದ್ರೂ ಕಾಮನ್ ಸೆನ್ಸ್ ಇರ್ಬೇಕು. ಇವರ್ಯಾರನ್ನೂ ನಂಬಿಕೊಂಡು ನಾವು ಸರ್ಕಾರ ಮಾಡಿಲ್ಲ. ಇವರಿಗೆ ಯಡಿಯೂರಪ್ಪ ಬಗ್ಗೆ ಅಸಮಧಾನ ಇದ್ರೆ ಶಾಸಕಾಂಗ ಸಭೆಯಲ್ಲಿ ಮಾತನಾಡಲಿ. ಅದನ್ನು ಹಾದಿ ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ. ಅವರ್ಯಾರಿಂದಲೂ ಸರ್ಕಾರ ಬಂದಿಲ್ಲ ಎಂದು ಹರಿಹಾಯ್ದರು. ಯಡಿಯೂರಪ್ಪ ನಾಯಕತ್ವದ ಲ್ಲಿ 104 ಜನ ಗೆದ್ದಿದ್ದರು. ಜೆಡಿಎಸ್ ಕಾಂಗ್ರೆಸ್ ನ ನಾವು 17 ಜನ ಅವ್ರ ಜೊತೆ ಬಂದೆವು. ಸರ್ಕಾರ ಆಗಿದೆ. ಯಡಿಯೂರಪ್ಪನ ನೇತೃತ್ವದಲ್ಲಿ 104 ಜನ ಗೆಲ್ಲದೆ ಇದ್ದಿದ್ರೆ ಸರ್ಕಾರ ಮಾಡಲು ಸಾಧ್ಯವಿತ್ತ..? ಎಂದು ಪ್ರಶ್ನಿಸಿದ ಸಚಿವ ಎಸ್.ಟಿ ಸೋಮಶೇಖರ್, ಇವತ್ತು ಯಡಿಯೂರಪ್ಪನ ಬಗ್ಗೆ ಮಾತನಾಡುವ ಇವರು ಯಾಕೆ ಚುನಾವಣೆಯಲ್ಲಿ ಸೋತರು. ಒಂದು ಬಾರಿ ಸರಿ ಎರಡು ಬಾರಿ ಸರಿ. ಪ್ರತಿ ದಿನವೂ ಇವರದ್ದು ಯಡಿಯೂರಪ್ಪ ಅವ್ರನ್ನ ಟೀಕೆ ಮಾಡುವುದೇ ಆಗಿದೆ. ಯಡಿಯೂರಪ್ಪ ಅವ್ರ ಪರಿಶ್ರಮ, ನಾಯಕತ್ವ ಎಂತದ್ದು ಅನ್ನೋದನ್ನ ಅರಿತುಕೊಂಡು ಮಾತನಾಡಲಿ. ಯಡಿಯೂರಪ್ಪನವ್ರ ಸಮಕ್ಕೆ ಇರುವವರು ಮಾತನಾಡಿದ್ರೆ ಅದಕ್ಕೊಂದು ಬೆಲೆ ಇರುತ್ತೆ ಎಂದು ಬಿಎಸ್ ವೈ ವಿರುದ್ಧ ಮಾತನಾಡುವ ಶಾಸಕರಿಗೆ ಕುಟುಕಿದರು. : - - - - -