ರಫೇಲ್ ಕೇಂದ್ರ ಸರ್ಕಾರ ಪ್ರಾಯೋಜಿತ ಭ್ರಷ್ಟಾಚಾರ: ಟ್ವಿಟ್ಟರ್’ನಲ್ಲಿ ದಿನೇಶ್ ಗುಂಡೂರಾವ್ ಬೆಂಗಳೂರು, ಜುಲೈ 04, 2021 (..): ರಫೇಲ್ ಕೇಂದ್ರ ಸರ್ಕಾರದ ಪ್ರಾಯೋಜಿತ ಭ್ರಷ್ಟಾಚಾರ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಕಾಂಗ್ರೆಸ್‍ನ ಹಿರಿಯ ಮುಖಂಡ ದಿನೇಶ್ ಗುಂಡೂರಾವ್ ದೂರಿದ್ದಾರೆ. ರಫೇಲ್ ಡೀಲ್‍ನಲ್ಲಿ ವ್ಯಾಪಕ ಭ್ರಷ್ಟಾಚಾರದ ಅನುಮಾನದಿಂದಲೇ ಫ್ರಾನ್ಸ್ ಈ ಹಗರಣದ ತನಿಖೆಗೆ ಆದೇಶಿಸಿದೆ ಎಂದು ಸರಣಿ ಟ್ವೀಟ್ ಮಾಡಿ ಆರೋಪಿಸಿದ್ದಾರೆ. ಫ್ರಾನ್ಸ್‍ನಂತೆ ಇಲ್ಲೂ ಕೂಡ ಹಗರಣದ ತನಿಖೆಯಾಗಲಿ. ಪ್ರಧಾನಿ ನರೇಂದ್ರಮೋದಿ ಅವರು ತನಿಖೆಯನ್ನು ಸಂಸದೀಯ ಜಂಟಿ ಸಮಿತಿಗೆ ವಹಿಸಲಿ ಎಂದು ಅವರು ಒತ್ತಾಯಿಸಿದ್ದಾರೆ. ಈ ಪ್ರಕರಣದಲ್ಲಿ ಅಕ್ರಮ ನಡೆದಿಲ್ಲವೆಂದಾದರೆ 126 ರಫೇಲ್ ವಿಮಾನಗಳ ಬದಲು ಕೇವಲ 36 ವಿಮಾನ ಖರೀದಿಗೆ ಅನುಮೋದನೆ ಕೊಟ್ಟಿದ್ದೇಕೆ? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.