ವಿಮಾನದಲ್ಲಿ ಬಂದ ಮಹಿಳೆ ಬಳಿ ಇದ್ಧ 8 ಕೆಜಿಗೂ ಅಧಿಕ ತೂಕದ ಹೆರಾಯಿನ್ ವಶಪಡಿಸಿಕೊಂಡ ಪೊಲೀಸರು. ಬೆಂಗಳೂರು, ಜುಲೈ 2, 2021 (..):ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೆವೆನ್ಯೂ ಇಂಟೆಲಿಜೆನ್ಸ್ ನಿರ್ದೇಶನಾಲಯ (ಡಿಆರ್‌ಐ) ಸಿಬ್ಬಂದಿಗಳು 35 ವರ್ಷ ವಯಸ್ಸಿನ ಓರ್ವ ಮಹಿಳಾ ಪ್ರಯಾಣಿಕರಿಂದ 8 ಕೆಜಿಗೂ ಅಧಿಕ ತೂಕದ ಹೆರಾಯಿನ್ ಅನ್ನು ವಶಪಡಿಸಿಕೊಂಡಿರುವುದು ವರದಿಯಾಗಿದೆ. ಮಹಿಳೆ ಹೆರಾಯಿನ್ ಅನ್ನು ಬಹಳ ಬುದ್ಧಿವಂತಿಕೆಯಿಂದ ಸೂಟ್‌ ಕೇಸ್‌ ನ ಕೆಳಭಾಗದಲ್ಲಿ ಯಾರಿಗೂ ಕಾಣಿಸದೇ ಇರುವ ರೀತಿಯಲ್ಲಿ ಅಡಗಿಸಿಟ್ಟುಕೊಂಡು ಬಂದಿದ್ದರು ಎನ್ನಲಾಗಿದೆ. ಮಧ್ಯಪೂರ್ವ ದೇಶಗಳ ವಿಮಾನ ನಿಲ್ದಾಣ ಕೇಂದ್ರಗಳಿಂದ ಬಂದಂತಹ ವಿಮಾನದಲ್ಲಿ ಆ ಮಹಿಳೆ ಬೆಂಗಳೂರಿಗೆ ಜೂನ್ 30ರಂದು ಮುಂಜಾನೆ ಬಂದರು ಎನ್ನಲಾಗಿದೆ. ಈ ಹೆರಾಯಿನ್ ಮೊತ್ತ ರೂ.5.6 ಕೋಟಿ ಎನ್ನಲಾಗಿದ್ದು ಅದನ್ನು ವಶಪಡಿಸಿಕೊಂಡಿರುವ ಪೊಲೀಸರು ಮಾದವಸ್ತು ಕಳ್ಳ ಸಾಗಾಣಿಕೆಗಾಗಿ ಎನ್‌ಡಿಪಿಎಸ್ ಕಾಯ್ದೆಯಡಿ ದೂರು ದಾಖಲಿಸಿಕೊಂಡು ಆಕೆಯನ್ನು ಬಂಧಿಸಿದ್ದಾರೆ. …. () 30th 2021 35-- 8 , . . . ₹ 56 . : --- –-