ಪ್ರಥಮೇಶ್ ಮಿಶ್ರಾ ಆರ್ಸಿಬಿ ನೂತನ ಅಧ್ಯಕ್ಷ ಬೆಂಗಳೂರು ಜುಲೈ 02, 2021 (..):ಪ್ರಥಮೇಶ್ ಮಿಶ್ರಾ ಅವರನ್ನು ಆರ್‌ಸಿಬಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಹೌದು. ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ನೂತನ ಅಧ್ಯಕ್ಷರಾಗಿ ಪ್ರಥಮೇಶ್ ಮಿಶ್ರಾ ಆಯ್ಕೆಯಾಗಿದ್ದಾರೆ. ಡಿಯಾಗೋ ಇಂಡಿಯಾದ ಅಂಗ ಸಂಸ್ಥೆಯಾಗಿರುವ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್, ಆರ್​ಸಿಬಿ ತಂಡದ ಮಾಲೀಕತ್ವವನ್ನು ಹೊಂದಿದೆ. ಇದೀಗ ಡಿಯಾಗೋ ಇಂಡಿಯಾದಲ್ಲಿ ಮುಖ್ಯ ವ್ಯವಹಾರ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಥಮೇಶ್ ಮಿಶ್ರಾ ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಮೈಕ್ ಹೆಸನ್ ಆರ್​ಸಿಬಿ ತಂಡದ ನಿರ್ದೇಶಕರಾಗಿದ್ದು, ಆಸ್ಟ್ರೇಲಿಯಾದ ಮಾಜಿ ಆಟಗಾರ ಸೈಮನ್ ಕಾಟಿಚ್ ಕೋಚ್ ಆಗಿದ್ದಾರೆ.