ಭಾರಿ ಮೊತ್ತಕ್ಕೆ ಕೆ.ಜಿ.ಎಫ್ 2 ಆಡಿಯೋ ರೈಟ್ಸ್ ಪಡೆದ ಲಹರಿ ಬೆಂಗಳೂರು ಜುಲೈ 02, 2021 (..):ಲಹರಿ ಸಂಸ್ಥೆ ಕೆ.ಜಿ.ಎಫ್ 2 ಚಿತ್ರದ ಆಡಿಯೋ ಹಕ್ಕನ್ನು ಪಡೆದುಕೊಂಡಿದೆ. ಹೌದು. ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಕೆ.ಜಿ.ಎಫ್ 2 ಚಿತ್ರದ ಆಡಿಯೋ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಈ ಹಿಂದೆ ಕೆಜಿಎಫ್ ಚಾಪ್ಟರ್-1ರ ಹಾಡುಗಳ ಹಕ್ಕನ್ನೂ ಸಹ ಲಹರಿ ಸಂಸ್ಥೆಯೇ ಖರೀದಿಸಿತ್ತು. ಈ ಭಾಗದಲ್ಲಿ 6 ಹಾಡುಗಳಿವೆ ಎನ್ನಲಾಗಿದೆ. ಕೆಲವೇ ದಿನಗಳಲ್ಲಿ ಚಿತ್ರದ ಹಾಡುಗಳು ಮಾರುಕಟ್ಟೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.