ಚಿತ್ರತಂಡದಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಬೆಂಗಳೂರು, ಜುಲೈ 01, 2021 (..): ಚಿತ್ರತಂಡ ಇದೀಗ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದೆ. ಬಾಹುಬಲಿ 2 ಬಳಿಕ ರಾಜಮೌಳಿ 2018ರಲ್ಲಿ ​ ಚಿತ್ರವನ್ನು ಕೈಗೆತ್ತಿಕೊಂಡಿದ್ದರು. ಹೀಗಾಗಿ ಯಾವಾಗ ಚಿತ್ರ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು ಕಾದಿದ್ದರು. ಈ ಕುರಿತು ಚಿತ್ರತಂಡ ಮಾಹಿತಿಯೊಂದನ್ನು ಹಂಚಿಕೊಂಡಿದೆ. 2021ರಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಚಿತ್ರದ ಇಬ್ಬರು ನಾಯಕರಾದ ರಾಮ್​ ಚರಣ್​ ಹಾಗೂ ಜೂನಿಯರ್​ ಎನ್​ಟಿಆರ್​ ಹೊಸ ಪೋಸ್ಟರ್​ನ್ನ ಕೂಡ ರಿಲೀಸ್ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಬಹುತೇಕ ಕಂಪ್ಲೀಟ್​ ಆಗಿದ್ದು, ಕೇವಲ 2 ಹಾಡುಗಷ್ಟೇ ಬಾಕಿಯಿವೆ. ಈಗಾಗಲೇ ನಾಯಕರಿಬ್ಬರೂ ಡಬ್ಬಿಂಗ್​ ಕೂಡ ಮುಗಿದಿದೆ.