ಕೊರೋನಾದಿಂದಾಗಿ ಸ್ಥಗಿತಗೊಂಡಿದ್ಧ ತಿರುಪತಿ ಪ್ಯಾಕೇಜ್ ಮತ್ತೆ ಆರಂಭ. ಬೆಂಗಳೂರು,ಜೂನ್,29,2021(..):ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ಕೊರೋನಾ ಕಾರಣದಿಂದ ಕಳೆದ ಎರಡು ತಿಂಗಳಿಂದ ಸ್ಥಗಿತಗೊಳಿಸಿದ್ದ ತಿರುಪತಿ ಬಾಲಾಜಿ ಶೀಘ್ರ ದರ್ಶನ ಪ್ರವಾಸ ಪ್ಯಾಕೇಜ್ ಅನ್ನ ಪುನಾರಂಭಗೊಳಿಸಿದೆ. ದಿನಾಂಕ: 30.06.2021 ರಿಂದ ಅನ್ವಯವಾಗುವಂತೆ ತಿರುಪತಿ ಪ್ಯಾಕೇಜ್ ಅನ್ನು ಪುನಃ ಪ್ರಾರಂಭಿಸಲು ಕ್ರಮಕೈಗೊಂಡಿದೆ. ಪ್ರಸಿದ್ಧ ಪ್ರವಾಸಿ ತಾಣಗಳು, ಪಾರಂಪರಿಕ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳಬಹುದು. ಕೆಎಸ್ಟಿಡಿಸಿ ವಾರದ ಏಳು ದಿನ ಕೂಡ ಪ್ರವಾಸಿಗರಿಗೆ ಸೇವೆ ನೀಡಲಿದೆ. ಮಹಾಮಾರಿ ಕೊರೊನಾದಿಂದ ನಿಲ್ಲಿಸಲಾಗಿದ್ದ ಈ ಸೇವೆ ಮತ್ತೆ ಶುರುವಾಗಿದ್ದು ಹಿರಿಯ ನಾಗರಿಕರಿಗೆ ಸದರಿ ಪ್ರವಾಸದ ಸಾರಿಗೆ ವೆಚ್ಚದಲ್ಲಿ 20% ವಿಶೇಷ ರಿಯಾಯಿತಿ ನೀಡಲಾಗಿದೆ. ನಿಗಮವು ಕೊವಿಡ್-19 ಸಂಬಂಧದ ಎಲ್ಲಾ ಸುರಕ್ಷಾ/ಮುಂಜಾಗೃತ ಕ್ರಮಗಳನ್ನು ಕೈಗೊಂಡಿದೆ. ನಿಗಮವು ಕೋವಿಡ್-19 ಸಂಬಂಧದ ಎಲ್ಲಾ ಸುರಕ್ಷಾ/ಮುಂಜಾಗೃತ ಕ್ರಮಗಳನ್ನು ಕೈಗೊಂಡು ಈ ಸೇವೆ ಆರಂಭಿಸಿದೆ. ಪ್ರವಾಸಗಳಿಗೆ ನಿಯೋಜಿಸಲಾಗಿರುವ ವಾಹನಗಳನ್ನು ಪ್ರತಿದಿನ ಸ್ಯಾನಿಟೈಸ್ ಮಾಡಲಾಗುವುದು. ಸಿಬ್ಬಂದಿಗಳಿಗೆ ಹಾಗೂ ಪ್ರವಾಸಿಗರಿಗೆ ಪ್ರತಿ ದಿನ ಥರ್ಮಲ್ ಸ್ಕ್ಯಾನಿಂಗ್ ಮಾಡುವುದು. ಪ್ರವಾಸಿಗರಿಗೆ ಹಾಗೂ ಸಿಬ್ಬಂದಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ಬಳಸುವುದನ್ನು ಕಡ್ಡಾಯಗೊಳಿಸಲಾಗಿದೆ. ಪ್ರವಾಸಿಗರಿಗೆ ಆಸನಗಳನ್ನು ಸಾಮಾಜಿಕ ಅಂತರದೊಂದಿಗೆ ಕಾಯ್ದಿರಿಸಲಾಗುವುದು ಎಂದು ನಿಗಮ ತಿಳಿಸಿದೆ. ಈ ಸೇವೆಗಳ ಸದುಪಯೋಗ ಪಡೆಯಲಿಚ್ಛಿಸುವ ಪ್ರವಾಸಿಗರು ನಿಗಮದ ಯಶವಂತಪುರ ಕೇಂದ್ರ, ಕಛೇರಿಯ ಬುಕ್ಕಿಂಗ್ ಕೌಂಟರ್, ಕೆಂಪೇಗೌಡ ಬುಕ್ಕಿಂಗ್ ಕೌಂಟರ್ ಹಾಗೂ ರೆಡ್‌ಬಸ್ ಪೋರ್ಟಲ್ ಹಾಗೂ ನಿಗಮದ ಅಧಿಕೃತ ಟ್ರಾವೆಲ್ ಏಜೆಂಟ್‌ಗಳ ಮುಖಾಂತರ ಮುಂಗಡ ಬುಕ್ಕಿಂಗ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆನ್‌ಲೈನ್ ಬುಕ್ಕಿಂಗ್ : .. ಭೇಟಿ ನೀಡಬಹುದು. ಹಾಗೂ 080-4334 4334/35, 91 8970650070/ 91 8970650075 ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು. : - –-